ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ನ್ಯಾಯಾಂಗ ವಿಚಾರಣೆ! ಕಾರಣವೇನು?

masthmagaa.com:

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವ್ರು ಕ್ಯಾಪಿಟೋಲ್‌ ಗಲಭೆಯಲ್ಲಿ ಗಾಯಗೊಂಡಿದ್ದವ್ರಿಂದ ನ್ಯಾಯಾಂಗ ವಿಚಾರಣೆ ಎದುರಿಸೊ ಸಾಧ್ಯತೆ ಇದೆ ಅಂತ ಜಸ್ಟೀಸ್‌ ಡಿಪಾರ್ಟ್‌ಮೆಂಟ್‌ ಹೇಳಿದೆ. ಟ್ರಂಪ್‌ ಅಧ್ಯಕ್ಷರಾಗಿದ್ದ ಸಮಯದಲ್ಲಿ 2021 ಜನವರಿ 6ರಂದು ಕ್ಯಾಪಿಟೋಲ್‌ನಲ್ಲಿ ಉಂಟಾಗಿದ್ದ ಗಲಭೆ ಕೇಸ್‌ಗೆ ಸಂಬಂಧಿಸಿದಂತೆ ವರದಿಯನ್ನ ಜಸ್ಟೀಸ್‌ ಡಿಪಾರ್ಟ್‌ಮೆಂಟ್‌ ವಾಷಿಂಗ್ಟನ್‌ ಕೋರ್ಟ್‌ ಮುಂದೆ ಸಬ್‌ಮಿಟ್‌ ಮಾಡಿದೆ. ಟ್ರಂಪ್‌ ಅಧ್ಯಕ್ಷರಾಗಿದ್ದ ಸಮಯದಲ್ಲಿ ಗಲಭೆ ಆಗಿದ್ರಿಂದ ಅವ್ರಿಗೆ ಸಾಮಾನ್ಯವಾಗಿ ಅಧ್ಯಕ್ಷೀಯ ಪವರ್‌ ಇತ್ತು. ಹಾಗಾಗಿ ಅವ್ರು ಕೇಸ್‌ ವಿರುದ್ಧ ರಕ್ಷಣೆಯನ್ನ ಕೂಡ ಹೊಂದಿದ್ದಾರೆ. ಆದ್ರೆ ಗಲಭೆಯಲ್ಲಿ ಗಾಯಗೊಂಡವ್ರು ಮತ್ತು ಪೊಲೀಸರು ದಾಖಲಿಸಿರೊ ಕೇಸ್‌ನಲ್ಲಿ ಟ್ರಂಪ್‌ ನ್ಯಾಯಾಂಗ ವಿಚಾರಣೆಗೆ ಒಳಪಡ್ಬೇಕಾಗುತ್ತೆ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ.

-masthmagaa.com

Contact Us for Advertisement

Leave a Reply