ನ್ಯಾಟೋ ಸತ್ತೋಯ್ತು, ಯುರೋಪ್‌ಗೆ ಕಷ್ಟಕ್ಕೆ ಬರಲ್ಲ: ಟ್ರಂಪ್

masthmagaa.com:

2020ರಲ್ಲಿ ಯೂರೋಪಿಯನ್‌ ಯೂನಿಯನ್‌ ಅಧ್ಯಕ್ಷರಿಗೆ ಡೊನಾಲ್ಡ್‌ ಟ್ರಂಪ್‌ ಹೇಳಿದ್ದ ಮಾತೊಂದು ಇದೀಗ ವೈರಲ್‌ ಆಗಿದೆ. ನಾವು ಯುರೋಪ್‌ಗೆ ಸಹಾಯ ಮಾಡೋಕೆ ಬರಲ್ಲ. ಯಾರಾದ್ರು ಯೂರೋಪ್‌ ಮೇಲೆ ದಾಳಿ ಮಾಡಿದ್ರೆ. ನಾವು ಯೂರೋಪ್‌ ನೆರವಿಗೆ ಬರಲ್ಲ ಅಂತ ನೇರವಾಗಿ ಟ್ರಂಪ್‌ ಹೇಳಿದ್ದಾರೆ. ಯೂರೋಪಿನ್‌ ಪಾರ್ಲಿಮೆಂಟ್‌ನಲ್ಲಿ ಕೂತ್ಕೊಂಡೆ ಟ್ರಂಪ್‌ ಹೀಗೆ ಹೇಳಿದ್ದಾರೆ. ಅಲ್ಲದೆ ನ್ಯಾಟೋ ಸತ್ತೋಗಿದೆ. ನಾವು ಶೀಘ್ರವೇ ನ್ಯಾಟೋ ಇಂದ ಹೊರ ಬರ್ತೀವಿ ಅಂತ ಟ್ರಂಪ್‌ ಹೇಳಿದ್ದಾಗಿ ಅಧಿಕಾರಿಯೊಬ್ರು ಹೇಳಿದ್ದಾರೆ. ಇನ್ನು ನ್ಯೂ ಜೆರ್ಸಿಯ ಮಾಜಿ ಗವರ್ನರ್‌ ಕ್ರಿಸ್‌ ಕ್ರಿಸ್ಟಿ, ಪ್ರೆಸಿಡೆನ್ಶಿಯಲ್‌ ರೇಸ್‌ನಿಂದ ಹೊರಬಿದ್ದಿದ್ದಾರೆ.

-masthmagaa.com

Contact Us for Advertisement

Leave a Reply