ಟ್ರಂಪ್‌ರನ್ನೇ ಮೂಲೆಗುಂಪು ಮಾಡಲು ಹೊರಟ ನಿಕ್ಕಿ ಹ್ಯಾಲೆ! ಹೇಳಿದ್ದೇನು?

masthmagaa.com:

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂಬರುವ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗ್ತಾರೆ ಅಂತ ನನಗೆ ಅನ್ಸಲ್ಲ ಅಂತ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಡ್‌ ಮಾಡಿರುವ ನಿಕ್ಕಿ ಹ್ಯಾಲೆ, ಟ್ರಂಪ್‌ರ ರಿಪಬ್ಲಿಕ್‌ ಪಕ್ಷದಿಂದ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಈಗ ಇಂಟರ್‌ವ್ಯೂ ಒಂದ್ರಲ್ಲಿ ಮಾತಾಡಿರುವ ನಿಕ್ಕಿ, ಚುನಾವಣೆಗೆ ಸ್ಪರ್ಧಿಸಲು ರಿಪಬ್ಲಿಕ್‌ ಪಕ್ಷದಿಂದ ಟ್ರಂಪ್‌ ನಾಮನಿರ್ದೇಶನಗೊಳ್ತಾರೆ ಅಂತ ನಾನು ಭಾವಿಸೋದಿಲ್ಲ. ಪಕ್ಷ ನನ್ನನ್ನ ನಾಮಿನೇಟ್‌ ಮಾಡುತ್ತೆ ಎಂದು ನಾನು ಭಾವಿಸುತ್ತೇನೆ ಅಂತ ಹೇಳಿದ್ದಾರೆ. ಇದೇ ವೇಳೆ ರಿಪಬ್ಲಿಕ್‌ ಪಕ್ಷದಿಂದ ಯಾರೇ ಅಧ್ಯಕ್ಷರಾದ್ರೂ ಸಹ ಅಧ್ಯಕ್ಷ ಜೋ ಬೈಡನ್‌ ಹಾಗೂ ಕಮಲಾ ಹ್ಯಾರಿಸಗಿಂತ ನಮ್ಮ ಪಕ್ಷದವರು ಉತ್ತಮ ಎಂದು ಹೇಳಲು ಬಯಸುತ್ತೇನೆ ಅಂತ ನಿಕ್ಕಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply