ಪ್ರಧಾನಿ ಮೋದಿ ಮನೆ ಮೇಲೆ ಹಾರಾಡಿದ ಅಪರಿಚಿತ ಡ್ರೋನ್‌! ಭದ್ರತಾ ಲೋಪ?

masthmagaa.com:

ದೆಹಲಿಯಲ್ಲಿರೋ ಪ್ರಧಾನಿ ನರೇಂದ್ರ ಮೋದಿಯವರ ಮನೆ ಮೇಲೆ ಅಪರಿಚಿತ ಡ್ರೋನ್‌ ಹಾರಾಟ ನಡೆಸಿರೋ ಘಟನೆ ನಡೆದಿದೆ. ಬೆಳಿಗ್ಗೆ ಸುಮಾರು 5.30ರ ವೇಳೆ ಮೋದಿಯವ್ರ ನಿವಾಸದ ಮೇಲೆ ಡ್ರೋನ್‌ ಹಾರಾಟದ ಬಗ್ಗೆ ಮಾಹಿತಿ ಬಂದಿದ್ದು, ತನಿಖೆ ನಡೆಸಲಾಗ್ತಿದೆ. ಇಲ್ಲಿಯವರೆಗೂ ಯಾವುದೇ ಸಂಶಯಾಸ್ಪದ ವಸ್ತುಗಳು ಕಂಡು ಬಂದಿಲ್ಲ ಅಂತ ಪೊಲೀಸರು ತಿಳಿಸಿದ್ದಾರೆ. ಅಂದ್ಹಾಗೆ ಪ್ರಧಾನಿಯವರ ನಿವಾಸದ ನೋ ಫ್ಲೈಯಿಂಗ್‌ ಜೋನ್‌ ಇದ್ದು ಅಲ್ಲಿ ಯಾವುದೇ ವಸ್ತುಗಳು ಹಾರಾಟ ನಡೆಸುವಂತಿಲ್ಲ. ಈ ಬಗ್ಗೆ ಪ್ರತ್ಯೇಕ ವರದಿಯನ್ನ ಈಗಾಗಲೇ ಪಬ್ಲಿಷ್‌ ಮಾಡಿದ್ದು, ನೀವದನ್ನ ಚೆಕ್‌ ಮಾಡ್ಬೋದು.

-masthmagaa.com

Contact Us for Advertisement

Leave a Reply