ದುಬೈನಲ್ಲಿ ಜಗತ್ತಿನ ಅತಿದೊಡ್ಡ ಏರ್‌ಪೋರ್ಟ್‌ ನಿರ್ಮಾಣಕ್ಕೆ ಸಜ್ಜು!

masthmagaa.com:

ದುಬೈನಲ್ಲಿ ಜಗತ್ತಿನ ಅತಿದೊಡ್ಡ ಏರ್‌ಪೋರ್ಟ್‌ ನಿರ್ಮಿಸೋಕೆ ದುಬೈ ದೊರೆ ಶೇಕ್‌ ಮಹಮ್ಮದ್‌ ಬಿನ್‌ ರಶೀದ್‌ ಅಲ್‌ ಮುಕ್ತುಮ್‌ ಮುಂದಾಗಿದ್ದಾರೆ. ಇದಕ್ಕಾಗಿ 35 ಬಿಲಿಯನ್‌ ಡಾಲರ್‌ ಅಂದ್ರೆ 2.9 ಲಕ್ಷ ಕೋಟಿ ರೂಪಾಯಿ ಮೌಲ್ಯದ ಯೋಜನೆಯನ್ನ ಘೋಷಿಸಿದ್ದಾರೆ. ಸುಮಾರು 2.6 ಲಕ್ಷ ಪ್ಯಾಸೆಂಜರ್‌ಗಳನ್ನ ಮ್ಯಾನೇಜ್‌ ಮಾಡೋ ಸಾಮರ್ಥ್ಯ ಹೊಂದಿರೋ ಈ ಏರ್‌ಪೋರ್ಟ್‌ನಲ್ಲಿ 5 ಪ್ಯಾರಲೆಲ್‌ ರನ್‌ವೇಗಳು ಮತ್ತು 400 ಏರ್‌ಕ್ರಾಫ್ಟ್‌ ಗೇಟ್‌ಗಳಿರಲಿವೆ.

-masthmagaa.com

Contact Us for Advertisement

Leave a Reply