ತಮಿಳುನಾಡಿನಲ್ಲಿ ಮಳೆ ಆರ್ಭಟ: ಸಿಲುಕಿದ 500 ಪ್ಯಾಸೆಂಜರ್ಸ್‌

masthmagaa.com:

ಇತ್ತೀಚಿಗಷ್ಟೇ ಮಿಚಾಂಗ್‌ ಚಂಡಮಾರುತದಿಂದ ತತ್ತರಿಸಿದ್ದ ತಮಿಳುನಾಡಿನಲ್ಲಿ ವರುಣನ ಆರ್ಭಟ ಜೋರಾಗಿದೆ. ದಕ್ಷಿಣ ಭಾಗದ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದ ಕಾರಣ ಸಾಮಾನ್ಯ ಜನರ ಜೀವನ ಅಸ್ತವ್ಯಸ್ತವಾಗಿದೆ. ಮಳೆ ಸಂಬಂಧಿತ ಘಟನೆಗಳಲ್ಲಿ ಇದುವರೆಗೆ 3 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಭಾರತೀಯ ವಾಯು ಪಡೆ, ಸೇನೆ ಮತ್ತು ಬೇರೆ ಬೇರೆ ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆ ಶುರು ಹಚ್ಕೊಂಡಿವೆ. ಇನ್ನು ಅಲ್ಲಿನ ಶ್ರೀವೈಕುಂಟಮ್‌ ರೈಲ್ವೇ ಸ್ಟೇಷನ್‌ ಪ್ರವಾಹದಲ್ಲಿ ಮುಳುಗಡೆಯಾಗಿ, ಸುಮಾರು 500 ಪ್ಯಾಸೆಂಜರ್ಸ್‌ ಸಿಲುಕಿಕೊಂಡಿದ್ದು, ಭಾರತೀಯ ವಾಯುಪಡೆ ಅವ್ರಿಗೆ ಬೇಕಾದ ನೆರವು ವಸ್ತುಗಳನ್ನ ಹೆಲಿಕಾಪ್ಟರ್‌ನಿಂದ ಏರ್‌ ಡ್ರಾಪ್‌ ಮಾಡ್ತಿದೆ. ಜೊತೆಗೆ ಆರೋಗ್ಯ ಸರಿಯಿಲ್ಲದವ್ರನ್ನ ಏರ್‌ಲಿಫ್ಟ್‌ ಕೂಡ ಮಾಡಲಾಗ್ತಿದೆ. ಆದ್ರೆ ತೀವ್ರ ಪ್ರವಾಹ ಉಂಟಾಗಿರೋ ಕಾರಣ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು (NDRF) ಪ್ಯಾಸೆಂಜರ್ಸ್‌ನ್ನ ರೀಚ್‌ ಆಗೋಕೆ ಹರಸಾಹಸ ಪಡ್ತಿವೆ. ಇವೆಲ್ಲದರ ನಡುವೆ ಜನರ ಸೇಫ್ಟಿಗಾಗಿ 13 ಬಸ್‌ಗಳು ರಕ್ಷಣಾ ಸಾರಥಿಯಾಗಿ ನಿಂತಿವೆ. ಇನ್ನು ಸಿಲುಕಿಕೊಂಡಿರೋ ಪ್ರಯಾಣಿಕರನ್ನ ಚೆನ್ನೈಗೆ ತರೋಕೆ ಮಣಿಯಾಚ್ಚಿ ಸ್ಟೇಷನ್‌ನಲ್ಲಿರೋ ಸ್ಪೆಷಲ್‌ ಟ್ರೈನ್‌ನ್ನ ನಿಯೋಜಿಸಲಾಗಿದೆ. ಮಳೆ ಸುರಿಯೋದು ಆಲ್ಮೋಸ್ಟ್‌ ಕಡಿಮೆಯಾದ್ರೂ, ಇದ್ರಿಂದ ಸಂಭವಿಸಿದ್ದ ಪ್ರವಾಹ ಮಟ್ಟ ಮಾತ್ರ ಕಡಿಮೆಯಾಗಿಲ್ಲ ಅಂತ ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

-masthmagaa.com

 

Contact Us for Advertisement

Leave a Reply