ಪೂಂಚ್‌ ದಾಳಿ: ಉಗ್ರರ ಬೇಟೆಗೆ ಮೊಬೈಲ್‌ ಇಂಟರ್‌ನೆಟ್‌ ಬಂದ್‌!

masthmagaa.com:

ಜಮ್ಮು ಕಾಶ್ಮೀರದ ಪೂಂಚ್‌ ಜಿಲ್ಲೆಯಲ್ಲಿ ನಡೆದ ಉಗ್ರ ದಾಳಿಯ ತನಿಖೆಗೆ ರಾಷ್ಟ್ರೀಯ ತನಿಖಾ ದಳ ಅಥ್ವಾ NIA ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ. ಘಟನೆ ನಡೆದ ಪ್ರದೇಶವನ್ನ ಸ್ಕ್ಯಾನ್‌ ಮಾಡಿ, 12ಕ್ಕೂ ಹೆಚ್ಚು ಶಂಕಿತರ ವಿಚಾರಣೆ ನಡೆಸಿದ್ದಾರೆ. ಸಾಮಾನ್ಯವಾಗಿ ಸೇನಾ ಪಡೆಗಳ ಮೇಲೆ ಉಗ್ರ ದಾಳಿ ನಡೆದಾಗ ಇದ್ರಲ್ಲಿ ಕೇಂದ್ರ ಇನ್ವಾಲ್ವ್‌ ಆಗಲ್ಲ. ಆದ್ರೆ ಇದೀಗ ಸೇನಾ ಪಡೆಗಳು ಈ ವಿಚಾರವಾಗಿ ದೊಡ್ಡ ಮಟ್ಟಿಗೆ ಕಾರ್ಯಾಚರಣೆ ನಡೆಸ್ತಿದ್ರೂ, NIA ತನಿಖೆ ನಡೆಸೋಕೆ ಬಂದಿದೆ ಅಂದ್ರೆ, ಈ ಮ್ಯಾಟರ್‌ ಎಷ್ಟು ಸೀರಿಯಸ್‌ ಆಗಿದೆ ಅನ್ನೋದನ್ನ ಹೇಳುತ್ತೆ. ತನಿಖಾ ಸಂಬಂಧ ರಜೌರಿ ಮತ್ತು ಪೂಂಚ್‌ ಜಿಲ್ಲೆಗಳಲ್ಲಿ ಡಿಸೆಂಬರ್‌ 22 ರಂದು ಇಂಟರ್‌ನೆಟ್‌ ಸೇವೆಯನ್ನ ಸ್ಟಾಪ್‌ ಮಾಡಲಾಗಿತ್ತು. ಜೊತೆಗೆ ಭದ್ರತಾ ಪಡೆಗಳು ಉಗ್ರರ ಬೇಟೆಗೆ ದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆಯನ್ನ ಸ್ಟಾರ್ಟ್‌ ಮಾಡಿದ್ದಾರೆ.

ಇನ್ನು ಈ ಪ್ರದೇಶಗಳಲ್ಲಿ ವೈಮಾನಿಕ ಕಣ್ಗಾವಲು ಹೆಚ್ಚಿಸಲಾಗಿದ್ದು, Ground Combing ಕಾರ್ಯಚರಣೆಯನ್ನ ಶುರು ಮಾಡಲಾಗಿದೆ. ವಿಶೇಷವಾಗಿ ಅಲ್ಲಿನ ಡೇರಾ ಕಿ ಗಲಿ ಅರಣ್ಯ ಪ್ರದೇಶದಲ್ಲಿ ಈ ಕಾರ್ಯಚರಣೆ ನಡೆಸಲಾಗ್ತಿದೆ. ಇನ್ನು ಈ ಕಾರ್ಯಾಚರಣೆ ವೇಳೆ ಗಡಿ ದಾಟೋಕೆ ಟ್ರೈ ಮಾಡಿದ ಉಗ್ರನೊಬ್ಬನನ್ನ ಭದ್ರತಾ ಪಡೆಗಳು ಕೊಂದು ಹಾಕಿವೆ. ಡಿಸೆಂಬರ್‌ 23 ರಂದು ಅಂದ್ರೆ ಇವತ್ತು ಜಮ್ಮುವಿನ ಖೌರ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಣ್ಗಾವಲಿಡೋ ಡಿವೈಸ್‌ಗಳ ಮೂಲಕ ಈ ಪ್ರದೇಶದಲ್ಲಿ ಭಾರೀ ಶಸ್ತ್ರಾಸ್ತ್ರಗಳನ್ನ ಹೊಂದಿರೋ ಉಗ್ರರ ಮೂವ್‌ಮೆಂಟ್‌ನ್ನ ಡಿಟೆಕ್ಟ್‌ ಮಾಡಲಾಯ್ತು. ಉಗ್ರರ ಚಲನವಲನ ಡಿಟೆಕ್ಟ್‌ ಆದ ಕೂಡಲೇ ಭಾರತೀಯ ಸೇನಾ ಪಡೆಗಳು ಕಾರ್ಯಾಚರಣೆ ಸ್ಟಾರ್ಟ್‌ ಮಾಡಿದ್ರು. ಈ ಸಂದರ್ಭದಲ್ಲಿ ಬಾರ್ಡರ್‌ ದಾಟೋಕೆ ಪ್ರಯತ್ನ ಪಟ್ಟ ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿದ ಸೇನಾ ಪಡೆ ಒಬ್ಬ ಉಗ್ರನನ್ನ ಹೊಡೆದುರುಳಿಸಿದ್ದಾರೆ. ಇನ್ನು ಈ ಉಗ್ರನ ಮೃತ ದೇಹವನ್ನ ಆತನ ಜೊತೆಗಿದ್ದವ್ರೆ ವಾಪಾಸ್‌ ತೆಗೆದ್ಕೊಂಡು ಹೋಗಿದ್ದಾರೆ ಅಂತ ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂದ್ಹಾಗೆ ಕಳೆದ ಒಂದು ವರ್ಷದಲ್ಲಿ ಪೂಂಚ್‌ ಪ್ರದೇಶದಲ್ಲಿ ನಡೆದಿರೋ ದಾಳಿಗಳಲ್ಲಿ 24 ಭದ್ರತಾ ಸಿಬ್ಬಂದಿ ಮತ್ತು 28 ಉಗ್ರರು ಮೃತಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply