ರಷ್ಯಾದ ವಿದೇಶಾಂಗ ಸಚಿವರ ಜೊತೆಗೆ ಹೈ ಲೆವೆಲ್‌ ಮೀಟಿಂಗ್‌ ಮಾಡಿದ ಜೈ ಶಂಕರ್‌!

masthmagaa.com:

ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಸಚಿವರ ಸಭೆಗಾಗಿ ಚೀನಾ, ರಷ್ಯಾ, ಪಾಕಿಸ್ತಾನ ಸೇರಿ 7ದೇಶಗಳ ವಿದೇಶಾಂಗ ಸಚಿವರು ಭಾರತಕ್ಕೆ ಬಂದಿದ್ದಾರೆ. ಗೋವಾದ ಖಾಸಗೀ ಹೋಟೆಲ್‌ನಲ್ಲಿ ಮೇ 4 ಹಾಗೂ ಮೇ 5 ನೇ ತಾರೀಖು, ಅಂದ್ರೆ ಇವತ್ತು ಮತ್ತು ನಾಳೆ ಈ ಸಭೆ ನಡೆಯಲಿದೆ. ಭಾರತದ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಈ ಸಭೆಗಳ ಅಧ್ಯಕ್ಷತೆ ವಹಿಸುತ್ತಿದ್ದಾರೆ. ಇನ್ನು ಇವತ್ತು ಸೈಡ್‌ಲೈನ್‌ನಲ್ಲಿ ರಷ್ಯಾ ವಿದೇಶಾಂಗ ಸಚಿವ ಸರ್ಗೇ ಲಾವ್ರೋ ಜೊತೆಗೆ ಜೈಶಂಕರ್‌ ದ್ವಿಪಕ್ಷೀಯ ಮಾತುಕತೆ ಮಾಡಿದ್ದಾರೆ. ಈ ವೇಳೆ ಉಭಯ ದೇಶಗಳ ಸಹಕಾರ ಸಂಬಂಧದ ಕುರಿತು ಹಾಗೇ ಯುಕ್ರೇನ್‌ ವಿಚಾರವನ್ನೂ ಚರ್ಚೆ ಮಾಡಲಾಗಿದೆ. ಈ ಕಡೆ ಚೀನಾ ವಿದೇಶಾಂಗ ಸಚಿವ ಕಿನ್‌ ಗಾಂಗ್‌ ಜೊತೆಗೂ ಜೈಶಂಕರ್‌ ಮೀಟಿಂಗ್‌ ಮಾಡಿದ್ದಾರೆ.  ಗಡಿ ವಿಚಾರ, ಇಬ್ರ ಮಧ್ಯೆ ಇರೋ ಸಮಸ್ಯೆಗಳು ಹಾಗೂ ಸಹಕಾರ ಕ್ಷೇತ್ರದ ಬಗ್ಗೆ ಮಾತುಕತೆ ಮಾಡಿದ್ದೀವಿ ಅಂತ ಜೈಶಂಕರ್‌ ಟ್ವೀಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply