6.2 ತೀವ್ರತೆಯ ಭೂಕಂಪಕ್ಕೆ ನಡುಗಿದ ಚೀನಾ: ಕನಿಷ್ಠ 118 ಸಾವು

masthmagaa.com:

ಚೀನಾದ ನಾರ್ತ್‌ವೆಸ್ಟ್‌ ಭಾಗದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಇದುವರೆಗೆ ಕನಿಷ್ಠ 118 ಮಂದಿ ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಚೀನಾದ ಈ ಭಾಗದಲ್ಲಿರೋ ಗನ್ಸು ಮತ್ತು ಕಿಂಗ್ಹೈ ಪ್ರಾಂತ್ಯದಲ್ಲಿ 6.2 ತೀವ್ರತೆಯ ಭೀಕರ ಭೂಕಂಪ ಸಂಭವಿಸಿರೋದಾಗಿ ಯುರೋಪಿಯನ್ ಮೆಡಿಟರೇನಿಯನ್ ಸಿಸ್ಮಾಲಾಜಿಕಲ್‌ ಸೆಂಟರ್‌ ಹೇಳಿದೆ. ಗನ್ಸು ಪ್ರಾಂತ್ಯದ ರಾಜಧಾನಿ ಲಾಂಝೋವುದ ಪಶ್ಚಿಮ- ನೈಋತ್ಯ ಭಾಗದ 102 ಕಿಮೀ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಡಿಸೆಂಬರ್‌ 18 ರಂದು ಉಂಟಾದ ಈ ಘಟನೆಯಲ್ಲಿ ಒಟ್ಟು 105 ಮಂದಿ ಗನ್ಸು ಪ್ರಾಂತ್ಯದಲ್ಲಿ ಮೃತಪಟ್ಟಿದ್ರೆ, 13 ಮಂದಿ ಅದ್ರ ಪಕ್ಕದಲ್ಲಿರೋ ಕಿಂಗ್ಹೈ ಪ್ರಾಂತ್ಯದಲ್ಲಿ ಮೃತಪಟ್ಟಿದ್ದಾರೆ. ಇನ್ನು ಭೂಕುಸಿತ ಉಂಟಾಗಿ 20 ಮಂದಿ ಕಾಣೆಯಾಗಿದ್ದಾರೆ ಅಂತ ವರದಿಯಾಗಿದೆ. ಪ್ರಾಣ ಹಾನಿ ಜೊತೆಗೆ ಆಸ್ತಿನಾಶ ಕೂಡ ಉಂಟಾಗಿದೆ. ಭೂಮಿ ಪ್ರಬಲವಾಗಿ ಕಂಪಿಸಿದ್ದರಿಂದ ಭಾರಿ ಪ್ರಮಾಣದಲ್ಲಿ ಅನಾಹುತ ಉಂಟಾಗಿದೆ. ಮನೆಗಳು ಹಾಗೂ ಕಟ್ಟಡಗಳು ಕುಸಿದು ಬಿದ್ದಿದ್ದು, ರಸ್ತೆಗಳು ಕಂಪ್ಲೀಟ್‌ ಡ್ಯಾಮೇಜ್‌ ಆಗಿವೆ. ಜೊತೆಗೆ ವಿದ್ಯುತ್‌ ಮತ್ತು ಇತರೆ ಸಂಪರ್ಕ ಲೈನ್‌ಗಳು ಕಟ್‌ ಆಗಿವೆ. ಸದ್ಯ ಭೂಕಂಪದ ಅವಶೇಷದಲ್ಲಿ ಸಿಲುಕಿಕೊಂಡಿರೋರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಸಾಗ್ತಿದೆ. ಜೊತೆಗೆ ಭೂಕಂಪದಲ್ಲಿ ಮೃತಪಟ್ಟವರ ಮತ್ತು ಗಾಯಗಳಾಗಿರೋರ ಸಂಖ್ಯೆ ಇನ್ನಷ್ಟು ಏರಿಕೆ ಆಗ್ಬೋದು ಅಂತ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ರಿಯಾಕ್ಟ್‌ ಮಾಡಿರೋ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಜನರ ಸೇಫ್ಟಿಗಾಗಿ ಕೆಲ ಇಂಪಾರ್ಟೆಂಟ್‌ ಸೂಚನೆಗಳನ್ನ ನೀಡಿದ್ದಾರೆ. ಶೋಧ ಮತ್ತು ಪರಿಹಾರ ಕಾರ್ಯಾಚರಣೆಗೆ ಎಲ್ಲಾ ಪ್ರಯತ್ನ ನಡೆಸಬೇಕು. ಬದುಕುಳಿದವರು ಹಾಗೂ ಅವರ ಆಸ್ತಿ ಪಾಸ್ತಿಗಳ ಸುರಕ್ಷತೆಗೆ ಗಮನ ಹರಿಸಬೇಕು ಅಂತ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅಂದ್ಹಾಗೆ ಚೀನಾದಲ್ಲಿ ಆಗಾಗ ಭೂಕಂಪ ಆಗ್ತಲೇ ಇರುತ್ತೆ. ಇತ್ತೀಚೆಗೆ ಆಗಸ್ಟ್‌ ತಿಂಗಳಲ್ಲಿ ಚೀನಾದ ಪೂರ್ವ ಭಾಗದಲ್ಲಿ ಸಣ್ಣ ಪ್ರಮಾಣದ ಭೂಕಂಪ ಸಂಭವಿಸಿತ್ತು. ಇದ್ರಲ್ಲಿ ಸುಮಾರು 23 ಜನರಿಗೆ ಗಾಯಗಳಾಗಿದ್ವು.

-masthmagaa.com

Contact Us for Advertisement

Leave a Reply