ದಕ್ಷಿಣ ಅಮೆರಿಕದ ಈಕ್ವೆಡಾರ್‌ನಲ್ಲಿ ಭಾರಿ ಗಲಭೆ: 10 ಜನರ ಸಾವು!

masthmagaa.com:

ಮಾದಕ ಲೋಕದ ರಕ್ತಸಿಕ್ತ ಅಧ್ಯಾಯ ದಕ್ಷಿಣ ಅಮೆರಿಕದಲ್ಲಿ ಮುಂದುವರೆದಿದೆ. ನಶಾದೊರೆಗಳ ವಿರುದ್ಧ ಸಮರ ಸಾರಿರೋ ಇಕ್ವೆಡಾರ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಅಲ್ಲಿನ ಕ್ವಿಟೋದಲ್ಲಿ ಮಂಗಳವಾರ 13 ಬಂಧೂಕುದಾರಿ ಬಂಡುಕೋರರು ಚಾನೆಲ್‌ ಒಂದಕ್ಕೆ ನುಗ್ಗಿ ಲೈವ್‌ ಸ್ಟ್ರೀಮ್‌ ಆಗ್ತರೋವಾಗಲೇ ಸ್ಟುಡಿಯೋನ ವಶಕ್ಕೆ ತಗೊಂಡಿದ್ದಾರೆ. ಅಂದ್ಹಾಗೆ ಪೆರು, ಕೊಲಂಬಿಯಾ, ಮೆಕ್ಸಿಕೊದ ನಶಾ ಮಾಫಿಯಾ ಡಾನ್‌ಗಳ ಕೈಲಿ ಇಕ್ವೆಡಾರ್‌ ನಲುಗಿ ಹೋಗ್ತಿತ್ತು. ಈ ಸಂಬಂಧ ಅಕ್ಟೋಬರ್‌ನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಡೇನಿಯಲ್‌ ನೊಬೊವಾ ಇತ್ತೀಚೆಗೆ 22 ಗ್ಯಾಂಗ್‌ಗಳನ್ನ ಉಗ್ರಸಂಘಟನೆ ಅಂತ ಡಿಕ್ಲೇರ್‌ ಮಾಡಿದ್ರು. ಅಲ್ಲದೇ ಇವ್ರನ್ನ ಮಟ್ಟಹಾಕ್ತೀವಿ ಅಂತ ಅಬ್ಬರಿಸಿದ್ರು. ಇದ್ರ ಬೆನ್ನಲ್ಲೇ ನಶಾ ಮಾಫಿಯಾ ಇಕ್ವೆಡಾರ್‌ನಲ್ಲಿ ಭಾರೀ ಹಿಂಸಾಚಾರ ನಡೆಸ್ತಿವೆ. ಈ ಹಿಂಸಾಚಾರದಲ್ಲಿ ಇದುವರೆಗು ಸುಮಾರು 10 ಜನ ಸಾವನ್ನಪ್ಪಿದ್ದಾರೆ.

-masthmagaa.com

Contact Us for Advertisement

Leave a Reply