ಬೆಲೆ ಏರಿಕೆ ಖಂಡಿಸಿ ಈಕ್ವೇಡಾರ್‌ನಲ್ಲಿ ಪ್ರತಿಭಟನೆ! ಸಂಸತ್‌ ಕಟ್ಟದ ಮುಂದೆ ಭಾರಿ ಜನಸ್ತೋಮ!

masthmagaa.com:

ಬೆಲೆ ಏರಿಕೆ ಹಾಗೂ ಇನ್ನಿತರ ಸಮಸ್ಯೆಗಳನ್ನ ಖಂಡಿಸಿ ದಕ್ಷಿಣ ಅಮೆರಿಕದ ಈಕ್ವೇಡಾರ್‌ನಲ್ಲಿ ನಡೀತಿರೋ ಪ್ರತಿಭಟನೆ 12ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದ ವಿರುದ್ದ ಜನ ಬೀದಿಗಳಿದು ಹೋರಾಟ ಮಾಡ್ತಿದ್ದು ಹಲವು ಭಾಗಗಳಲ್ಲಿ ಈಗಾಗಲೇ ತುರ್ತುಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಇದರ ನಡುವೆಯೇ ಈಗ ಅಲ್ಲಿನ ವಿರೋಧ ಪಕ್ಷದ ಸದಸ್ಯರು ಅಧ್ಯಕ್ಷ ಗಿಲ್ಲಿರ್ಮೋ ಲಾಸ್ಸೋ ರಾಜೀನಾಮೆಗೆ ಒತ್ತಾಯ ಮಾಡಿದ್ದಾರೆ. ಇತ್ತ ನಿನ್ನೆಯಷ್ಟೇ ಅಲ್ಲಿ ಸಂಸತ್‌ ಕಟ್ಟಡಕ್ಕೆ ಕೆಲ ಪ್ರತಿಭಟನಾಕಾರರು ನುಗ್ಗಲೆತ್ಸಿದ್ರು ಅವರ ವಿರುದ್ದ ಪ್ರತಿಭಟನೆ ಪೊಲೀಸರು ಅಶ್ರುವಾಯು ಸಿಡಿಸಿದ್ರು. ಈಗ ಅದೇ ಸಂಸತ್‌ ಕಟ್ಟದ ಮುಂದೆ ಸಾವಿರಾರು ಜನರು ಪ್ರತಿಭಟನೆ ಮಾಡ್ತಿದ್ದಾರೆ ಅಂತ ವರದಿಯಾಗಿದೆ. ಇನ್ನು ಪ್ರತಿಭಟನೆ ಆರಂಭವಾದ ಇಲ್ಲಿತನಕ ಕನಿಷ್ಠ 6 ಮಂದಿ ಸಾವಿಗೀಡಾಗಿದ್ದಾರೆ ಅಂತ ಅಲ್ಲಿನ ಆಡಳಿತ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply