ಈಕ್ವೆಡಾರ್‌ನಲ್ಲಿ ಹೆಚ್ಚಾಯ್ತು ಹಿಂಸಾಚಾರ: ಜೈಲು ಸಿಬ್ಬಂದಿಯೇ ಲಾಕ್!

masthmagaa.com:

ದಕ್ಷಿಣ ಅಮೆರಿಕದ ಈಕ್ವೆಡಾರ್‌ನ ಭದ್ರತಾ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಸಶಸ್ತ್ರ ಗುಂಪುಗಳು ಅಲ್ಲಿನ ಸರ್ಕಾರದ ವಿರುದ್ಧ ದಂಡೆದ್ದಿವೆ. ಪ್ರಪಂಚದ ಅತಿ ಹೆಚ್ಚಿನ ಮಾದಕ ವಸ್ತು ಉತ್ಪಾದನೆ ಮಾಡೋ ಪೆರು, ಕೊಲಂಬಿಯಾ ಮಧ್ಯೆ ಸ್ಯಾಂಡ್‌ವಿಚ್‌ ಆಗಿರೋ ಈಕ್ವೆಡಾರ್‌ನ್ನ, ಈ ಎರಡೂ ದೇಶಗಳು ವ್ಯಾಪಾರಕ್ಕಾಗಿ ಯೂಸ್‌ ಮಾಡಿಕೊಳ್ತಿದ್ವು. ಅವ್ರಿಗೆ ಸಪೋರ್ಟ್‌ ಮಾಡ್ತಿದ್ದ ಮಾಫಿಯಾ ಗ್ಯಾಂಗ್‌ಗಳ ವಿರುದ್ಧ ಈಕ್ವೆಡಾರ್‌ ಅಧ್ಯಕ್ಷ ಡೇನಿಯಲ್‌ ನಬೋಅ ಕ್ರಮ ತಗೊಂಡಿದ್ರು. ಇದ್ರಿಂದ ಅಲ್ಲಿನ ಬಂಡುಕೋರರು ಧಂಗೆಯೆದ್ದಿದ್ದಾರೆ. ಕಳೆದ ವಾರ ಅಲ್ಲಿನ ಜೈಲಿಂದ ಒಬ್ಬ ಮಾಫಿಯಾ ಗುಂಪಿನ ನಾಯಕ ಎಸ್ಕೇಪ್‌ ಆಗಿದ್ದ. ಇದೀಗ ದೇಶಾಧ್ಯಂತ ಹಿಂಸಾಚಾರಗಳು ಶುರುವಾಗಿವೆ. ಶನಿವಾರ ಅಲ್ಲಿನ ಜೈಲಿನ 158 ಸಿಬ್ಬಂದಿಯನ್ನ, ಖೈದೆಗಳೇ ಹಿಡಿದಿಟ್ಟುಕೊಂಡಿದ್ರು. ಇದೀಗ ಅವ್ರನ್ನ ಬಿಡಿಸಲಾಗಿದೆ.

-masthmagaa.com

Contact Us for Advertisement

Leave a Reply