ʻಬ್ರಿಟನ್‌ಗೆ ಕಠಿಣ ಕ್ರಮದ ಅಗತ್ಯ ಇದೆʼ : ಆರಂಭದಲ್ಲೇ ಎಚ್ಚರಿಕೆ ಕೊಟ್ಟ ರಿಷಿ ಸುನಾಕ್‌!

masthmagaa.com:

ಗ್ರೇಟ್‌ ಬ್ರಿಟನ್‌ನ ಹೊಸ ಪ್ರಧಾನಿಯಾಗಿ ಇಂದು ಅಲ್ಲಿನ ಮಾಜಿ ಹಣಕಾಸು ಸಚಿವ ರಿಷಿ ಸುನಾಕ್‌ ನೇಮಕವಾಗಿದ್ದಾರೆ. ರಾಜ ಮೂರನೇ ಚಾರ್ಲ್ಸ್‌ನ್ನ ಬಂಕಿಂಗ್‌ ಹ್ಯಾಮ್‌ ಅರಮನೆಯಲ್ಲಿ ಭೇಟಿಯಾದ ರಿಷಿ ಆ ಬಳಿಕ ಸಂಪ್ರದಾಯಂತೆ ರಾಜನಿಂದ ಒಪ್ಪಿಗೆ ಪಡೆದು ಔಪಚಾರಿಕವಾಗಿ ಪದಗ್ರಹಣ ಸ್ವೀಕರಿಸಿದ್ದಾರೆ. ಈ ವೇಳೆ ಮಾತನಾಡಿದ ರಿಷಿ ಸುನಾಕ್‌, ನಾವು ನೀಡಿದ್ದ ಭರವಸೆಯನ್ನ ಈಡೇರಿಸೋಕೆ ಹಗಲು ಇರುಳು ಶ್ರಮ ಹಾಕ್ತೀನಿ. ಒಗ್ಗಟ್ಟಿನ ಮೂಲಕ ದೇಶದ ಸಮಸ್ಯೆಗಳನ್ನ ಬಗೆಹರಿಸುವ ಪ್ರಯತ್ನ ಮಾಡ್ತೀನಿ. ನಿಮ್ಮೆಲ್ಲರ ನಂಬಿಕೆಯನ್ನ ನಾನು ಗಳಿಸ್ತೇನೆ. ಈಗ ನಮ್ಮ ದೇಶ ಫೇಸ್‌ ಮಾಡ್ತಿರೋ ಆರ್ಥಿಕ ಸಮಸ್ಯೆಯನ್ನ ಹೋಗಲಾಡಿಸೋಕೆ ಕೆಲವು ಕಠಿಣ ಕ್ರಮಗಳು ಅಗತ್ಯ. ಅದನ್ನ ತೆಗೆದುಕೊಳ್ಳಬೇಕಾಗುತ್ತೆ. ಮೊದಲು ಆರ್ಥಿಕ ಸ್ಥಿರತೆ ಸ್ಥಾಪಿಸಬೇಕು ಆ ಕೆಲಸವನ್ನ ನಾನು ಎಲ್ಲರ ಸಹಕಾರದಿಂದ ಮಾಡ್ತೀನಿ. ಪ್ರಧಾನಿಯಾಗಿ ಈಗಿನಿಂದಲೇ ನಾನು ಸೇವೆ ಮಾಡ್ತೀನಿ ಅಂತ ಹೇಳಿದ್ರು.

ಅತ್ತ ಬ್ರಿಟನ್‌ನಲ್ಲಿ ರಿಷಿ ಸುನಾಕ್‌ ಪ್ರಧಾನಿಯಾಗಿ ಪಟ್ಟಕ್ಕೆ ಏರಿದ್ರೆ ಇತ್ತ ಭಾರತದಲ್ಲಿ ರಾಜಕೀಯ ಪಕ್ಷಗಳ ವಾಕ್ಸಮರ ನಡೀತಿದೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಟ್ವೀಟ್‌ ಮಾಡಿದ್ದಾರೆ. ʻಅಲ್ಪಸಂಖ್ಯಾತ ಮೂಲದ ವ್ಯಕ್ತಿಯನ್ನು ಬ್ರಿಟನ್ ತನ್ನ ಪ್ರಧಾನಿಯಾಗಿ ಸ್ವೀಕಾರ ಮಾಡಿದೆ. ಭಾರತ ಇನ್ನೂ ಸಿಎಎ ಮತ್ತು ಎನ್‌ಆರ್‌ಸಿಯಂತಹ ಒಡೆಯುವ ಕಾನೂನುಗಳಲ್ಲಿ ಸಿಲುಕಿಕೊಂಡಿದೆ ಅಂತ ಹೇಳಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರೋ ಬಿಜೆಪಿ ನಾಯಕರು ಮನಮೋಹನ್‌ ಸಿಂಗ್‌ 10 ವರ್ಷ ಪ್ರಧಾನಿ, ಅಬ್ದುಲ್‌ ಕಲಾಂ 5 ವರ್ಷ, ಈಗ ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿದ್ದಾರೆ. ಭಾರತ ಇಷ್ಟೆಲ್ಲಾ ಮಾಡಿರುವಾಗ, ಜಮ್ಮು ಕಾಶ್ಮೀರದ ಸಿಎಂ ಆಗಿ ಅಲ್ಪ ಸಂಖ್ಯಾತ ಹಿಂದುವನ್ನು ಮೆಹಬೂಬಾ ಮುಫ್ತಿ ಒಪ್ಪಿಕೊಳ್ಳುತ್ತಾರೆಯೇ ಅಂತ ತಿರುಗೇಟು ಕೊಟ್ಟಿದ್ದಾರೆ. ಇನ್ನು ಕಾಂಗ್ರೆಸ್‌ ನಾಯಕ ಚಿದಂಬರಂ ಟ್ವೀಟ್‌ ಮಾಡಿ, ಮೊದಲು ಕಮಲಾ ಹ್ಯಾರಿಸ್, ಈಗ ರಿಷಿ ಸುನಕ್. ಅಮೆರಿಕ ಮತ್ತು ಯುಕೆ ಜನರು ತಮ್ಮ ದೇಶಗಳ ಬಹುಸಂಖ್ಯಾತರಲ್ಲದ ನಾಗರಿಕರನ್ನು ಅಪ್ಪಿಕೊಂಡಿದ್ದಾರೆ. ಅವರನ್ನ ಉನ್ನತ ಹುದ್ದೆಗೆ ಆಯ್ಕೆ ಮಾಡಿದ್ದಾರೆ. ಈ ಪಾಠವನ್ನು ಭಾರತ ಹಾಗೂ ಬಹುಸಂಖ್ಯಾತ ರಾಜಕಾರಣವನ್ನು ಅಪ್ಪಿಕೊಂಡ ಪಕ್ಷಗಳು ಕಲಿಯಬೇಕು ಅಂತ ಹೇಳಿದ್ರು. ಶಶಿ ತರೂರ್‌ ಕೂಡ ಇದೇ ರೀತಿ ಟ್ವೀಟ್‌ ಮಾಡಿ ಭಾರತದಲ್ಲಿ ಅದನ್ನ ನಿರೀಕ್ಷೆ ಮಾಡಬೋದ ಅಂತ ಹೇಳಿದ್ರು. ಇಂಟರಸ್ಟಿಂಗ್‌ ಅಂದ್ರೆ ಈ ಇಬ್ಬರ ಹೇಳಿಕೆಯನ್ನ ಸ್ವತಃ ಕಾಂಗ್ರೆಸ್‌ ಪಕ್ಷವೇ ತಳ್ಳಿಹಾಕಿದೆ. ಭಾರತ ಬೇರೆ ದೇಶದಿಂದ ಪಾಠ ಕಲಿಯುವ ಅಗತ್ಯ ಇಲ್ಲ ಅಂತ ಹೇಳಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ʻನಮ್ಮ ದೇಶದಲ್ಲಿ ಜಾಕೀರ್ ಹುಸೇನ್, ಫಕ್ರುದ್ದೀನ್ ಅಲಿ ಮತ್ತು ಅಬ್ದುಲ್ ಕಲಾಂ ರಾಷ್ಟ್ರಪತಿಯಾದರು. ಬರ್ಕತುಲ್ಲಾಖಾನ್, ಎಆರ್ ಅಂತುಲೇ ಮುಖ್ಯಮಂತ್ರಿಯಾಗಿದ್ರು ಅಂತ ಸ್ವಪಕ್ಷೀಯರಿಗೆ ಟಾಂಗ್‌ ಕೊಟ್ಟಿದ್ದಾರೆ.

ಇನ್ನು ಈ ಎಲ್ಲದರ ಮಧ್ಯೆ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ರಿಷಿಗೆ ಹೊಸ ಹೆಸರು ಕೊಟ್ಟಿದ್ದಾರೆ. ರಿಷಿ ಸುನಾಕ್‌ರನ್ನ ವೈಸರಾಯ್‌ ಅಂತ ಕರೆದಿದ್ದಾರೆ. ಟ್ವೀಟ್‌ ಮಾಡಿರೋ ಅವರು ʻಅಂತಿಮವಾಗಿ ತನ್ನ ಮಾತೃದೇಶದಿಂದ ಬ್ರಿಟನ್‌ ವೈಸ್‌ರಾಯ್‌ಯನ್ನ ಪಡೆದುಕೊಂಡಿದೆʼ ಅಂತ ಹೇಳಿದ್ದಾರೆ. ಅಂದ್ಹಾಗೆ ಈ ವೈಸ್‌ರಾಯ್‌ ಅಂದ್ರೆ ವಸಾಹತು ಶಾಹಿ ದೇಶದ ಆಡಳಿತ ನೋಡಿಕೊಳ್ಳೋಕೆ ನೇಮಕವಾಗಿರೋ ಅಧಿಕಾರಿ ಅನ್ನೋ ಅರ್ಥ ಇದೆ. ಇನ್ನು ಚಿರಂಜೀವಿ ಸೇರಿದಂತೆ ಹಲವು ಚಿತ್ರ ನಟರು ಕೂಡ ರಿಷಿಯ ನೇಮಕಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply