ಚುನಾವಣಾ ಬಾಂಡ್‌ಗಳ ಎರಡನೇ ಲಿಸ್ಟ್‌ ಬಿಡುಗಡೆ! ಬಿಜೆಪಿ ಅಗ್ರಸ್ಥಾನ!

masthmagaa.com:

ರಾಜಕೀಯ ಪಕ್ಷಗಳ ಚುನಾವಣಾ ಬಾಂಡ್‌ಗಳಿಗೆ ಸಂಬಂಧಪಟ್ಟಂತೆ ಎಲೆಕ್ಷನ್‌ ಕಮಿಷನ್‌ ಹೊಸದಾಗಿ ಎರಡನೇ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಸುಪ್ರೀಂ ಕೋರ್ಟ್‌ನ ಆದೇಶದ ಅನ್ವಯ SBI, ಬಾಂಡ್‌ಗಳ ಮಾಹಿತಿ ಬಹಿರಂಗ ಪಡಿಸಿದ ಬೆನ್ನಲ್ಲೇ ಈ ಹೊಸ ಡೇಟಾವನ್ನ ಎಲೆಕ್ಷನ್‌ ಕಮಿಷನ್‌ ಅಪ್‌ಲೋಡ್‌ ಮಾಡಿದೆ. ಈ ಹೊಸ ಡೇಟಾದಲ್ಲಿ ಏಪ್ರಿಲ್‌ 12, 2019ರ ಮೊದಲು ಯಾವೆಲ್ಲ ಪಕ್ಷಗಳು ಎಷ್ಟೆಷ್ಟು ಹಣ ಪಡೆದಿದ್ದಾರೆ ಅನ್ನೋ ಮಾಹಿತಿ ಇದೆ. ಈ ಪೈಕಿ 2ನೇ ಲಿಸ್ಟ್‌ನಲ್ಲಿಯೂ BJP ಟಾಪ್‌ನಲ್ಲಿದೆ. ಏಪ್ರಿಲ್‌ 12, 2019ಕ್ಕೂ ಬಿಜೆಪಿ ಒಟ್ಟು 6,986.5 ಕೋಟಿ ರೂಪಾಯಿ ಪಡೆದಿದೆ. ಈ ಪೈಕಿ 2,555 ಕೋಟಿ ರೂಪಾಯಿಯನ್ನ ಕೇವಲ 2019-20ರ ಅವಧಿಯಲ್ಲಿ ಪಡೆದಿದೆ ಅಂತ ಮಾಹಿತಿ ಸಿಕ್ಕಿದೆ. ಇನ್ನು ಬಿಜೆಪಿಯ ಬಳಿಕ TMC ಪಕ್ಷ ಒಟ್ಟು 1,397 ಕೋಟಿ ರೂಪಾಯಿ ಎನ್‌ಕ್ಯಾಶ್‌ ಮಾಡಿ ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್‌ ಮೂರನೇ ಸ್ಥಾನದಲ್ಲಿದ್ದು, ಒಟ್ಟು 1,334.35 ಕೋಟಿ ರೂಪಾಯಿ ಪಡೆದಿದೆ. ಅದನ್ನ ಬಿಟ್ರೆ BRS 1,322 ಕೋಟಿ ರೂಪಾಯಿ, DMK 656.5 ಕೋಟಿ ರೂಪಾಯಿ, ಸಮಾಜ್‌ವಾದಿ ಪಾರ್ಟಿ 14.05 ಕೋಟಿ, ಅಕಾಲಿ ದಳ 7.26 ಕೋಟಿ, AIADMK ಪಕ್ಷ 6.05 ಕೋಟಿ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ 50 ಲಕ್ಷ ರೂಪಾಯಿ ಎನ್‌ಕ್ಯಾಶ್‌ ಮಾಡಿವೆ. ಇಲ್ಲಿ ಬಿಜೆಪಿ ಕಾಂಗ್ರೆಸ್‌ ಟಿಎಂಸಿ ಸೇರಿ ಅನೇಕ ಪಕ್ಷಗಳು ಎಲ್ಲೆಲ್ಲಿಂದ ಹಣ ಪಡೆದಿದ್ದಾರೆ, ಇವರಿಗೆ ಯಾರು ಯಾರು ಹಣ ಕೊಟ್ಟಿದ್ದಾರೆ ಅನ್ನೋ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಆದ್ರೆ ಕೆಲವೊಂದು ಪಕ್ಷಗಳು ಈ ಬಗ್ಗೆ ಮಾಹಿತಿ ಹಂಚಿಕೊಂಡಿವೆ. ಈ ಪೈಕಿ ಅತ್ಯಂತ ಆಶ್ಚರ್ಯ ತಂದಿರೋದು ಡಿಎಂಕೆ ಪಕ್ಷಕ್ಕೆ ಕೊಟ್ಟಿರೋ ಹಣ..ಡಿಎಂಕೆಗೆ ಪ್ಯೂಚರ್‌ ಗೇಮಿಂಗ್‌ ಕಂಪನಿಯ… ಲಾಟರಿ ಕಿಂಗ್‌ ಸ್ಯಾಂಟಿಯಾಗೋ ಮಾರ್ಟಿನ್‌ ಭರ್ತಿ 656. 5 ಕೋಟಿ ರೂಪಾಯಿ ಹಣ ಕೊಟ್ಟಿದಾರೆ. ಅಂದ್ರೆ ಡಿಎಂಕೆ ಪಡೆದಿರೋ ಒಟ್ಟು ಬಾಂಡ್‌ ಹಣದ ಶೇ37ರಷ್ಟು ಹಣ ಈ ಒಂದೇ ಕಂಪನಿಯಿಂದ ಬಂದಿದೆ. ಹಾಗೇ ಜೆಡಿಎಸ್‌ ಪಕ್ಷಕ್ಕೆ 89 ಕೋಟಿ ರೂಪಾಯಿ ಹಣ ಬಂದಿದೆ. ಈ ಪೈಕಿ ಮೆಗಾ ಇಂಜಿನಿಯರಿಂಗ್‌ನಿಂದಲೇ 50 ಕೋಟಿ ಬಾಂಡ್‌ ಖರೀದಿಯಾಗಿದೆ. ಇವರು ತಮ್ಮ ಡೊನರ್‌ಗಳನ್ನ ಡಿಕ್ಲೇರ್‌ ಮಾಡಿಕೊಂಡಿವೆ. ಆದ್ರೆ ಇನ್ನುಳಿದವರ ಬಗ್ಗೆ ಮಾಹಿತಿ ಇಲ್ಲ.

-masthmagaa.com

Contact Us for Advertisement

Leave a Reply