ವಿದ್ಯುತ್‌ ಬಿಲ್‌ ಕಟ್ಟದ ಸರ್ಕಾರಿ ಆಸ್ಪತ್ರೆಗಳು, ನೋಟಿಸ್‌ ಜಾರಿ ಮಾಡಿದ ಬೆಸ್ಕಾಂ!

masthmagaa.com:

ಬೆಂಗಳೂರಿನ ಜಯನಗರದಲ್ಲಿರೋ ಸರ್ಕಾರಿ ಆಸ್ಪತ್ರೆ ಕರೆಂಟ್‌ ಬಿಲ್‌ ಕಟ್ಟೋಕೆ ಹಣವಿಲ್ಲದ ಕಾರಣ ಅನುದಾನ ಕೋರಿ ಆರೋಗ್ಯ ಇಲಾಖೆಗೆ ಪತ್ರ ಬರೆದಿದೆ. ಅನುದಾನ ಕೊರತೆಯಿಂದ ವಿದ್ಯುತ್‌ ಬಿಲ್‌ ಬಾಕಿ ಉಳಿದಿದೆ. ಇಲಾಖೆ ಹಣ ಬಿಡುಗಡೆ ಮಾಡಿದ್ಮೇಲೆ ಬಿಲ್‌ ಪಾವತಿಸುತ್ತೇವೆ, ಒಟ್ಟು 40 ಲಕ್ಷ ಅನುದಾನ ಕೋರಿ ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದೇವೆ ಅಂತ ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಇವುಗಳ ಜೊತೆಗೆ ಬೆಂಗಳೂರು ನಗರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳು ಹಾಗೂ ಪೊಲೀಸ್‌ ಠಾಣೆಗಳಿಗೆ ಬಾಕಿ ವಿದ್ಯುತ್‌ ಬಿಲ್ ಪಾವತಿ ಮಾಡಿ ಅಂತ ಬೆಸ್ಕಾಂ ನೋಟಿಸ್​ ನೀಡಿದೆ.

-masthmagaa.com

Contact Us for Advertisement

Leave a Reply