ಮಾರ್ಕ್‌ ಜೊತೆಗಿನ ಕುಸ್ತಿ ಪಂದ್ಯದ ಬಗ್ಗೆ ನಾನು ಜೋಕ್‌ ಮಾಡಿದ್ದೆ: ಮಸ್ಕ್‌

masthmagaa.com:

ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಹಾಗೂ ಮೆಟಾ ಮುಖ್ಯಸ್ಥ ಮಾರ್ಕ್‌ ಜುಕರ್‌ಬರ್ಗ್‌ ನಡುವೆ ಕುಸ್ತಿ ಪಂದ್ಯ ನಡೆಯತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ಇಬ್ಬರ ನಡುವೆ ವಾಕ್ಸಮರ ಮಾತ್ರ ಜೋರಾಗೆ ನಡಿತಿದೆ. ಇದೀಗ ಈ ಕೇಜ್‌ ಫೈಟ್‌ ಬಗ್ಗೆ ಟ್ವೀಟ್‌ ಮಾಡಿರುವ ಮಸ್ಕ್‌, ತಮ್ಮ ಟೆಸ್ಲಾ ಕಾರಿನ ಸಂಪೂರ್ಣ ಸ್ವಯಂಚಾಲಿತ ಡ್ರೈವ್‌ ಟೆಸ್ಟ್‌ ಮಾಡುತ್ತೇನೆ. ಈ ವೇಳೆ ನನ್ನ ಕಾರನ್ನ ಮಾರ್ಕ್‌ ಮನೆಗೆ ತೆರಳುವಂತೆ ಕೇಳಲಿದ್ದು, ಇತ್ತೀಚಿನ X ಪ್ಲಾಟ್‌ಫಾರ್ಮ್‌ನ ಲೈವ್‌ ವಿಡಿಯೋ ಟೆಸ್ಟ್‌ನ್ನ ಕೂಡ ಮಾಡಲಿದ್ದೇನೆ. ಅದೃಷ್ಟವಶಾತ್‌ ಜುಕರ್‌ಬರ್ಗ್‌ ಮನೆಯಲ್ಲಿದ್ದು, ಡೋರ್‌ ಓಪನ್‌ ಮಾಡಿದ್ರೆ ಕುಸ್ತಿ ಪಂದ್ಯ ನಡೆಯಲಿದೆ ಅಂತ ಮಸ್ಕ್‌ ಟ್ವೀಟ್‌ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮೆಟಾ ವಕ್ತಾರ, ಜುಕರ್‌ಬರ್ಗ್‌ ಮನೆಯಲ್ಲಿ ಇಲ್ಲ ಅವರು ಟ್ರಾವೆಲ್‌ನಲ್ಲಿದ್ದಾರೆ. ಅಲ್ದೆ ಮಾರ್ಕ್‌ ಅವ್ರು ಈ ಗೇಮ್‌ನ್ನ ಸೀರಿಯಸ್‌ ಆಗಿ ತೆಗೆದುಕೊಂಡಿದ್ದು, ಸಡನ್‌ ಆಗಿ ಮನೆಯ ಬಳಿ ಬರೋರ ಜೊತೆಯಲ್ಲಿ ಫೈಟ್‌ ಮಾಡೋದಿಲ್ಲ ಅಂತ ಹೇಳಿದ್ದಾರೆ. ಇತ್ತ ಇಷ್ಟಕ್ಕೆ ಸುಮ್ಮನಾಗದ ಮಸ್ಕ್‌, ಮತ್ತೊಂದು ಪೋಸ್ಟ್‌ ಹಾಕಿದ್ದು, ನಾನು ಪ್ರಾರಂಭದಲ್ಲಿ ಫೈಟ್‌ ಬಗ್ಗೆ ಜೋಕ್‌ ಮಾಡಿದ್ದೆ. ಆದ್ರೆ ಮಾರ್ಕ್‌ ಅವರೇ ಲೊಕೇಶನ್‌ ಕಳಿಸಿ ಅಂದ್ರು ಅದಕ್ಕೆ ನಾನು ಇಟಲಿಯಲ್ಲಿ ಸ್ಪರ್ಧೆ ನಡೆಸಲು ತಿಳಿಸಿದೆ. ಅದಕ್ಕೂ ಮಾರ್ಕ್‌ ಒಪ್ಲಿಲ್ಲ ಸೋ ಹೋಗ್ಲಿ ಅಂತ ಅವರ ಮನೆಯೇ ಸುರಕ್ಷಿತ ಸ್ಥಳವಾಗಿದ್ದು, ಅಲ್ಲಿಯೇ ಫೈಟ್‌ ಮಾಡೋಣ ಅಂದೆ. ಆದ್ರೆ ಜುಕರ್‌ಬರ್ಗ್‌ ಟ್ರಾವೆಲ್‌ನಲ್ಲಿದ್ದಾರಂತೆ..ಈಗ ಮಾರ್ಕ್‌ ಫೈಟ್‌ ಮಾಡೋ ಜಾಗ ಎಲ್ಲಾದ್ರು ಇದ್ಯಾ ಅಂತ ಮಸ್ಕ್‌ ಪ್ರಶ್ನಿಸಿದ್ದಾರೆ.

-masthmagaa.com

Contact Us for Advertisement

Leave a Reply