ಟ್ವಿಟರ್‌ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲು ಮುಂದಾದ ಮಸ್ಕ್!

masthmagaa.com:

ಟೆಸ್ಲಾ ಸಿಇಓ ಎಲಾನ್‌ ಮಸ್ಕ್‌ ಟ್ವಿಟರ್‌ ಖರೀದಿ ಪೂರ್ಣಗೊಳಿಸಿದ ಬೆನ್ನಲ್ಲೇ ಅದರ ಉದ್ಯೋಗಿಗಳನ್ನ ಕೆಲಸದಿಂದ ತೆಗಿಯೋ ಪ್ರಕ್ರಿಯೆ ಶುರು ಮಾಡಿದ್ದಾರೆ. ಜಾಬ್ಸ್‌ ಕಟ್‌ ಮಾಡಿ ಕೆಲವು ಟೀಮ್‌ಗಳನ್ನ ಕಡಿಮೆ ಮಾಡಲು ತಿಳಿಸಿದ್ದಾರೆ ಅಂತ ವರದಿಯಾಗಿದೆ. ಸುಮಾರು 7,500 ಉದ್ಯೋಗಿಗಳಿರುವ ಕಂಪನಿಯಲ್ಲಿ ಎಷ್ಟು ಜನರನ್ನ ಕೆಲಸದಿಂದ ತೆಗೆಯಲಿದ್ದಾರೆ ಅನ್ನೋದು ತಿಳಿದು ಬಂದಿಲ್ಲ. ಅಂದ್ಹಾಗೆ ಈ ಪ್ರಕ್ರಿಯೆ ನವೆಂಬರ್‌ 1ರೊಳಗೆ ನಡೆಯಲಿದೆ ಅಂತ ಹೇಳಲಾಗ್ತಿದೆ. ಇನ್ನು ಕಂಪನಿಯು ʻcontent moderation councilʼ ರಚಿಸಲಿದೆ ಇದ್ರ ಮೂಲಕ ಪ್ರಮುಖ ನಿರ್ಧಾರಗಳು ಮತ್ತು ಅಕೌಂಟ್‌ಗಳ ಮರುಸ್ಥಾಪನೆ ನಡೆಯಲಿದೆ ಅಂತ ಮಸ್ಕ್‌ ಹೇಳಿದ್ದಾರೆ. ಇತ್ತ ಟ್ವಿಟರ್‌ನ್ನ ಮಸ್ಕ್‌ ಸ್ವಾಧೀಪಡಿಸಿಕೊಂಡ ಬೆನ್ನಲ್ಲೇ ಸಂಸ್ಥೆಯ ಕೋ-ಫೌಂಡರ್‌ ಜಾಕ್‌ ಡಾರ್ಸಿ, ತಮ್ಮ ಹೊಸ ಸೋಷಿಯಲ್‌ ಮೀಡಿಯಾ ಆಪ್‌ನ ಬಿಲ್ಡ್ ಮಾಡೋಕೆ ಮುಂದಾಗಿದ್ದಾರೆ. ಇದರ ನಿಟ್ಟಿನಲ್ಲಿ ನೂತನ ʻಬ್ಲ್ಯೂಸ್ಕೈʼ ಹೆಸರಿನ ಆಪ್‌ನ ಬೀಟಾ ಪರೀಕ್ಷೆ ಮಾಡ್ತಿದ್ದಾರೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply