ಯುಕ್ರೇನ್‌ ಯುದ್ದದಲ್ಲಿ ಪುಟಿನ್ ಸೋಲಲ್ಲ ಅಂದ ಟೆಸ್ಲಾ ದಿಗ್ಗಜ!

masthmagaa.com:

ಯುಕ್ರೇನ್‌ ವಿರುದ್ದದ ಯುದ್ದದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸೋಲಲ್ಲ ಅಂತ ಟೆಸ್ಲಾ ದಿಗ್ಗಜ ಎಲಾನ್‌ ಮಸ್ಕ್‌ ಇದೀಗ ಭವಿಷ್ಯ ನುಡಿದಿದ್ದಾರೆ. ಜೊತೆಗೆ ಒಂದ್ವೇಳೆ ಯುಕ್ರೇನ್‌ ಯುದ್ದದಿಂದ ಪುಟಿನ್‌ ಹಿಂದೆ ಸರಿದ್ರೆ ಅವ್ರನ್ನ ಹತ್ಯೆ ಮಾಡಬಹುದು ಅಂತ ಮಸ್ಕ್‌ ಹೇಳಿದ್ದಾರೆ. ಇನ್ನು ಯುದ್ದದಲ್ಲಿ ಯುಕ್ರೇನ್‌ಗೆ ನೆರವು ನೀಡೊ 60 ಬಿಲಿಯನ್‌ ಡಾಲರ್‌ ಅಂದ್ರೆ 498 ಕೋಟಿ ರೂ ವೆಚ್ಚದ ಅಮೆರಿಕ ಪಾಸ್‌ ಮಾಡಿರೋ ಬಿಲ್‌ಗೆ ಮಸ್ಕ್‌ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ದೇ ಈ ನೆರವಿನಿಂದ ಯುಕ್ರೇನ್‌ಗೆ ಯಾವ್ದೇ ರೀತಿ ಸಹಾಯ ಆಗಲ್ಲ ಅಂತ ಹೇಳಿದ್ದಾರೆ. ಇನ್ನು ಈ ಮಸೂದೆಯನ್ನ ರಿಪಬ್ಲಿಕನ್‌ ಸಂಸದರು ಕೂಡ ವಿರೋಧಿಸಿದ್ರು.

-masthmagaa.com

Contact Us for Advertisement

Leave a Reply