ಅಮೆರಿಕದಲ್ಲಿ ಟಿಕ್‌ಟಾಕ್‌ ಬ್ಯಾನ್‌ ವಿರೋಧಿಸಿದ ಎಲಾನ್‌ ಮಸ್ಕ್‌!

masthmagaa.com:

ಅಮೆರಿಕದಲ್ಲಿ ಚೀನಾ ಮೂಲದ ಟಿಕಾಟಾಕ್‌ ಬ್ಯಾನ್‌ಗೆ ತಯಾರಿ ನಡೀತಿದ್ರೆ, ಈ ಬಗ್ಗೆ ಟೆಸ್ಲಾ CEO ಎಲಾನ್‌ ಮಸ್ಕ್‌ ಅಚ್ಚರಿ ಅನ್ನೋ ಹಾಗೇ ವಿರೋಧ ವ್ಯಕ್ತಪಡಿಸಿದ್ದಾರೆ. ಅಚ್ಚರಿ ಯಾಕಂದ್ರೆ ಟಿಕ್‌ಟಾಕ್‌ ಕೂಡ ಸೋಷಿಯಲ್‌ ಮೀಡಿಯಾ ಫ್ಲಾಟ್‌ಫಾಮ್‌, ಫೇಸ್ಬುಕ್‌ ಸೇರಿದಂತೆ ಎಕ್ಸ್‌ ಗೂ ಕೂಡ ಪ್ರತಿಸ್ಪರ್ಧಿ ಸಂಸ್ಥೆ. ಸೋ ಮಸ್ಕ್‌ ವ್ಯವಹಾರದ ದೃಷ್ಟಿಲೀ ಇದನ್ನ ಬೆಂಬಲಿಸಬೇಕಿತ್ತು. ಆದ್ರೆ ಇದು ಆಗಬಾರದು ಅಂತ ಹೇಳಿದ್ದಾರೆ. ʻಟಿಕ್‌ ಟಾಕ್‌ನ್ನ ಅಮೆರಿಕದಲ್ಲಿ ಬ್ಯಾನ್‌ ಮಾಡೋದ್ರಿಂದ ಸ್ವಲ್ಪ ಮಟ್ಟಿಗೆ `X’ಗೆ ಬೆನಿಫಿಟ್‌ ಆದ್ರೂ ಕೂಡ, ನಿಜಕ್ಕೂ ಅದನ್ನ ಬ್ಯಾನ್‌ ಮಾಡ್ಬಾರ್ದು. ಹೀಗೆ ಮಾಡೋದ್ರಿಂದ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಧಕ್ಕೆಯಾಗುತ್ತೆʼ ಅಂತೇಳಿದ್ದಾರೆ. ಈ ಮೂಲಕ ಮಸ್ಕ್‌ ಮತ್ತೊಮ್ಮೆ ಪೊಲಿಟಿಕಲ್‌ ಆಂಗಲ್‌ ಸ್ಟೇಟ್‌ಮೆಂಟ್‌ ಕೊಟ್ಟಿದ್ದಾರೆ.! ಇತ್ತೀಚಿಗೆ ಇರಾನ್‌ ಸಂಘರ್ಷಕ್ಕೂ ಮಸ್ಕ್ ಪ್ರತಿಕ್ರಿಯೆ ಕೊಟ್ಟಿದ್ರು. ಮಿಸೈಲ್‌ನ್ನ ಒಬ್ರ ಮೇಲೆ ಒಬ್ರು ಹಾರಿಸಬಾರದು ಅಂತೇಳಿದ್ರು. ಈಗ ವಾಕ್‌ ಸ್ವಾತಂತ್ರದ ಬಗ್ಗೆ ಮಾತಾಡ್ತಾ, ಚೀನಾ ಜೊತೆಗೆ ಸಂಬಂಧ ಕಳ್ಕೋಬಾರದು ಅನ್ನೋ ಅರ್ಥದಲ್ಲೂ ಹೇಳಿಕೆ ಕೊಟ್ಟಿದ್ದಾರೆ ಅಮೆರಿಕಗೆ.

-masthmagaa.com

Contact Us for Advertisement

Leave a Reply