ಟ್ವಿಟರ್‌ ಡೇಟಾವನ್ನು AI ಕಂಪನಿಗಳು ಕದಿಯುತ್ತಿವೆ: ಮಸ್ಕ್‌

masthmagaa.com:

ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಅವರು ಇತ್ತೀಚೆಗೆ ತಮ್ಮ ನೂತನ AI ಕಂಪನಿ ʻxAIʼ ಅನ್ನ ಲಾಂಚ್‌ ಮಾಡಿದ್ದಾರೆ. ಇದೀಗ ಈ ಕಂಪನಿಯ AI ಮಾಡೆಲ್‌ಗಳಿಗೆ ಟ್ರೈನಿಂಗ್‌ ನೀಡಲು ಹಾಗೂ AI ಸಾಫ್ಟ್‌ವೇರ್‌ನಲ್ಲಿ ಟೆಸ್ಲಾ ಜೊತೆ ಕೆಲಸ ಮಾಡೋಕೆ ಟ್ವಿಟರ್‌ ಯೂಸರ್ಸ್‌ ಮಾಡಿರೋ ಟ್ವೀಟ್‌ಗಳನ್ನ ಬಳಸಿಕೊಳ್ಳಲಾಗುತ್ತೆ ಅಂತ ಮಸ್ಕ್‌ ಹೇಳಿದ್ದಾರೆ. ಅಲ್ದೆ ತಮ್ಮ ಕಂಪನಿಗಳ ನಡುವಿನ ಸಂಬಂಧ ಯಾವಾಗಲೂ ಪರಸ್ಪರ ಲಾಭ ಹೊಂದಿರುತ್ತವೆ ಅಂತ ಹೇಳಿದ್ದಾರೆ. ಇದೇ ವೇಳೆ AI ನಿಂದ ಮನುಷ್ಯರಿಗೆ ಇರೋ ಅಪಾಯಗಳನ್ನ ಕನ್ಸಿಡರ್‌ ಮಾಡದೇ AI ಕಂಪನಿಗಳು ಅವುಗಳನ್ನ ಡೆವಲಪ್‌ ಮಾಡ್ತಿದ್ದಾರೆ. ಅಷ್ಟೆ ಅಲ್ದೆ ಈ ಕಂಪನಿಗಳು ಟ್ವಿಟರ್‌ ಡೇಟಾವನ್ನ ಬಳಸಿಕೊಂಡು ತಮ್ಮ ಮಾಡೆಲ್‌ಗಳಿಗೆ ಟ್ರೈನಿಂಗ್‌ ನೀಡ್ತಿವೆ ಅಂತ ಮಸ್ಕ್‌ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply