Open AI ವಿರುದ್ಧ ದೂರು ದಾಖಲಿಸಿದ ಟೆಸ್ಲಾ CEO ಎಲಾನ್‌ ಮಸ್ಕ್‌!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ವಿಶ್ವದ ನಂ.2 ಶ್ರೀಮಂತ ಎಲಾನ್‌ ಮಸ್ಕ್‌ ಮೈಕ್ರೋಸಾಫ್ಟ್‌ ಮೇಲೆ ಯುದ್ಧ ಸಾರಿದ್ದಾರೆ. ಮೈಕ್ರೋಸಾಫ್ಟ್‌ ಜೊತೆಗಿನ ಸಂಬಂಧದ ವಿಚಾರವಾಗಿ ಸ್ಯಾನ್‌ಫ್ರಾನ್ಸಿಸ್ಕೋದ ಕೋರ್ಟ್‌ನಲ್ಲಿ Open AI ಮೇಲೆ ದೂರು ದಾಖಲಿಸಿದ್ದಾರೆ. ಆರಂಭದ ದಿನಗಳಲ್ಲಿ ಹೂಡಿಕೆ ಮಾಡಿ Open AIನ ಮಾಜಿ ಬೊರ್ಡ್‌ ಮೆಂಬರ್‌ ಕೂಡ ಆಗಿರೋ ಮಸ್ಕ್‌ Chat GPT ಸೃಷ್ಟಿಕರ್ತರ ವಿರುದ್ಧ ಸಿಡಿದೆದ್ದಿದ್ದಾರೆ. ಸಾರ್ವಜನಿಕ ಕಲ್ಯಾಣದಂತಹ ಧ್ಯೇಯೋದ್ದೇಶದಿಂದ Open AIನ ಶುರು ಮಾಡಲಾಗಿತ್ತು. ಜನರಿಗೆ ನೆರವಾಗುವಂತಹ AI ಸಿಸ್ಟಂಗಳನ್ನ ಅಭಿವೃದ್ಧಿಪಡಿಸೋದು ಇದ್ರ ಗುರಿಯಾಗಿತ್ತು. ಆದ್ರೆ ಈಗದು ಮೈಕ್ರೋಸಾಫ್ಟ್‌ ಅಡಿಗೆ ಲಾಭಕೋಸ್ಕರ ನಡೀತಿರೋ ಕಂಪನಿಯಾಗಿದೆ. ಪರೋಕ್ಷವಾಗಿ ಮೈಕ್ರೋಸಾಫ್ಟ್‌ನ ಸಬ್ಸಿಡರಿಯಾಗಿ ಕೆಲಸ ಮಾಡ್ತಿದೆ. ದೂರಿನಲ್ಲಿ Open AIನ ಅಧ್ಯಕ್ಷ ಗ್ರೆಗೊರಿ ಬ್ರಾಕ್‌ಮನ್‌ ಮತ್ತು CEO ಸ್ಯಾಮ್‌ ಅಲ್ಟಮನ್‌ರನ್ನ ಆರೋಪಿಗಳಾಗಿ ಹೆಸರಿಸಲಾಗಿದೆ. ಅಲ್ಲದೇ AI ಟೆಕ್ನಾಲಜಿಯಿಂದ ಮೈಕ್ರೋಸಾಫ್ಟ್‌ ಹಾಗು Open AI ಅಧಿಕಾರಿಗಳು ಪ್ರಾಫಿಟ್‌ ಗಳಿಸದ ಹಾಗೆ ತಡೆಯುವಂತೆ ಇಂಜಕ್ಷನ್‌ ಫೈಲ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply