2024 ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಬರ್ತಾರೆ ಫ್ರೆಂಚ್‌ ಅಧ್ಯಕ್ಷ!

masthmagaa.com:

ಮುಂಬರುವ 2024ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಫ್ರೆಂಚ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರಾನ್ ಮುಖ್ಯ ಅತಿಥಿಯಾಗಿ ಬರ್ತಾರೆ ಅಂತ ತಿಳಿದು ಬಂದಿದೆ.‌ ಈ ಮೂಲಕ ಭಾರತದ ಗಣರಾಜ್ಯೋತ್ಸವಕ್ಕೆ ಆಗಮಿಸಿದ 6ನೇ ಫ್ರೆಂಚ್‌ ನಾಯಕ ಅನ್ನೋ ಖ್ಯಾತಿಗೆ ಮ್ಯಾಕ್ರಾನ್ ಪಾತ್ರರಾಗಲಿದ್ದಾರೆ. ಜಿ-20 ಶೃಂಗ ಸಭೆಯಲ್ಲಿ ಭಾರತ-ಫ್ರೆಂಚ್‌ ದೇಶಗಳ ನಡುವಿನ ಸಹಕಾರ ವೃದ್ದಿಸಲು ಮಹತ್ವದ ಚರ್ಚೆಗಳಾಗಿದ್ದವು. ಆ ವೇಳೆ ಪ್ರಧಾನಿ ಮೋದಿ ಫ್ರಾನ್ಸ್‌ ಜೊತೆಗಿನ ಸಂಬಂಧ ಉನ್ನತವಾಗಿರಲಿದೆ ಅಂತ ಹೇಳಿದ್ರು. ಫ್ರಾನ್ಸ್‌ನಿಂದ ರಫೇಲ್‌ ಯುದ್ದ ವಿಮಾನಗಳನ್ನ ತರಿಸಿಕೊಳ್ಳೊಕೆ ಭಾರತಕ್ಕೆ ಫ್ರಾನ್ಸ್‌ ಸಮ್ಮತಿ ನೀಡಿದ ಬೆನ್ನಲ್ಲೇ ಉಭಯ ದೇಶಗಳ ಗಟ್ಟಿ ಸಂಬಂಧಕ್ಕೆ ಪುಷ್ಠಿ ನೀಡುವಂತೆ ಮ್ಯಾಕ್ರಾನ್ ಅತಿಥಿಯಾಗಿ ಬರ್ತಾರೆ ಅಂತ ವರದಿಯಾಗಿದೆ. ಅಂದ್ಹಾಗೆ ಅಮೆರಿಕಾ ಪ್ರೆಸಿಡೆಂಟ್‌ ಜೋ ಬೈಡನ್‌ರನ್ನ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆದ್ರೆ ಬೈಡನ್‌ ಬರೋಕ್ಕಾಗಲ್ಲ ಅಂತ ಅಮೆರಿಕಾ ರಾಯಭಾರಿ ಹೇಳಿದ ಪರಿಣಾಮ ಫ್ರೆಂಚ್‌ ಅಧ್ಯಕ್ಷರಿಗೆ ಆಹ್ವಾನಿಸಲಾಗಿದ್ದು, ಮ್ಯಾಕ್ರಾನ್ ಬರ್ತಾರೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply