ರಾಹುಲ್‌ ಕಮ್‌ ಬ್ಯಾಕ್‌..! ಇಂಗ್ಲೆಂಡ್‌ ಬೋಲರ್‌ಗಳಿಗೆ ಇದೆಯಾ ಹಿಟ್‌ ಮ್ಯಾನ್‌ ಭಯ?

masthmagaa.com:

ಅತಿಥೇಯ ಇಂಗ್ಲೆಂಡ್‌ ವಿರುದ್ದದ ಮೂರು ಟಿ – 20, ಹಾಗೂ ಏಕದಿನ ಪಂದ್ಯಗಳಿಗೆ BCCI ಟೀಂ ಪ್ರಕಟ ಮಾಡಿದ್ದು ನಾಯಕ ರೋಹಿತ್‌ ಶರ್ಮಾ ಮತ್ತೆ ತಂಡಕ್ಕೆ ಮರಳಲಿದ್ದಾರೆ.ಟಿ20 ಕ್ರಿಕೆಟ್‌ಸರಣಿಯ ಮೊದಲ ಪಂದ್ಯದಲ್ಲಿ ಕೆಲ ಯುವ ಆಟಗಾರರಿಗೆ ಅವಕಾಶ ನೀಡಿದ್ದು ಇದಕ್ಕಾಗಿಯೇ ಮೊದಲ ಪಂದ್ಯಕ್ಕೆ ಪ್ರತ್ಯೇಕ ತಂಡ ಪ್ರಕಟಿಸಲಾಗಿದೆ. 2 ಮತ್ತು3 ಪಂದ್ಯಗಳಿಗೆ ಬೇರೆ ತಂಡ ಪ್ರಕಟ ಮಾಡಲಾಗಿದ್ದು ಮಾಜಿ ನಾಯಕ ವಿರಾಟ್‌ ಕೊಹ್ಲಿ ಮತ್ತು ವೇಗಿ ಜಸ್‌ಪ್ರೀತ್‌ ಬುಮ್ರಾ ತಂಡ ಸೇರಿಕೊಳ್ಳಲಿದ್ದಾರೆ. ಇತ್ತ ಇಂಗ್ಲೆಂಡ್‌ ತಂಡಕ್ಕೂ ಕೂಡ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್‌ ನೂತನ ಕ್ಯಾಪ್ಟನ್‌ ಆಗಿ ನೇಮಕಗೊಂಡಿದ್ದಾರೆ.

-masthmagaa.com

Contact Us for Advertisement

Leave a Reply