ಏಷ್ಯನ್‌ ಗೇಮ್ಸ್‌: ಪದಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದ ಭಾರತ

masthmagaa.com:

ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಬೇಟೆ ಇಂದು ಕೂಡ ಮುಂದುವರೆದಿದೆ. 10 ಮೀಟರ್‌ ಏರ್‌ ಬಂದೂಕು ಶೂಟಿಂಗ್‌ನಲ್ಲಿ ಪಲಕ್‌, ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಜೊತೆಗೆ 50 ಮೀಟರ್‌ ರೈಫಲ್‌ ಶೂಟಿಂಗ್‌ನಲ್ಲಿ ಪುರುಷರ ತಂಡ ಕೂಡ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ಅತ್ತ 10 ಮೀಟರ್‌ ಏರ್‌ ಬಂದೂಕು ಶೂಟಿಂಗ್‌ನಲ್ಲಿ ಮಹಿಳಾ ತಂಡ ಬೆಳ್ಳಿ ಪದಕ ಗೆದ್ದುಕೊಂಡಿದೆ. ಇನ್ನು 10 ಮೀಟರ್‌ ಏರ್‌ ಬಂದೂಕು ಶೂಟಿಂಗ್‌ನಲ್ಲಿ ಇಶಾ ಸಿಂಗ್‌ ಬೆಳ್ಳಿ ಪದಕವನ್ನ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಮೆಡಲ್‌ ಪಟ್ಟಿಯಲ್ಲಿ 8 ಚಿನ್ನದ ಪದಕ, 11 ಬೆಳ್ಳಿ ಪದಕ ಮತ್ತು 12 ಕಂಚಿನ ಪದಕಗಳು ಸೇರಿ ಒಟ್ಟು 31 ಮೆಡಲ್‌ಗಳೊಂದಿಗೆ ಭಾರತ 4ನೇ ಸ್ಥಾನಕ್ಕೆ ಜಿಗಿದಿದೆ.

-masthmagaa.com

Contact Us for Advertisement

Leave a Reply