PSI ಪರೀಕ್ಷೆ ಅಕ್ರಮದ ಕಿಂಗ್‌ಪಿನ್‌ RD ಪಾಟೀಲ್‌ ಗೇಟ್ ಹಾರಿ ಎಸ್ಕೇಪ್‌!

masthmagaa.com:

PSI, KEA ಗಳು ನಡೆಸಿದ ಪರೀಕ್ಷೆಗಳಲ್ಲಿನ ಅಕ್ರಮ ಕೇಸ್‌ನ ಕಿಂಗ್‌ಪಿನ್‌ ಆರ್‌. ಡಿ. ಪಾಟೀಲ್‌ ಸೋಮವಾರ ಕಲ್ಬುರ್ಗಿಯಿಂದ ಎಸ್ಕೇಪ್‌ ಆಗಿದ್ದಾನೆ. PSI ಅಕ್ರಮದಲ್ಲಿ ಜೈಲುವಾಸ ಅನುಭವಿಸಿದ್ದ ಈತ, ಹೊರಗೆ ಬಂದು KEA ನಡೆಸಿದ್ದ ಪರೀಕ್ಷೆಯಲ್ಲು ತನ್ನ ಕೈಚಳಕ ತೋರಿಸಿದ್ದ. ಅಕ್ಟೋಬರ್‌ 28 ರಂದು ಈ ವಿಚಾರವಾಗಿ ಕೇಸ್‌ ಕೂಡ ದಾಖಲಾಗಿತ್ತು. ನಿನ್ನೆ ಅಂದ್ರೆ ಸೋಮವಾರ ಈತ ವಿಚಾರಣೆಗೆ ಹಾಜರಾಗ್ಬೇಕಿತ್ತು. ಅದಕ್ಕೂ ಗೈರಾಗಿ, ಇಂದು ಜೇವರ್ಗಿ ಪೊಲೀಸರು ಅರೆಸ್ಟ್‌ ಮಾಡಲು ಆತನಿದ್ದ ಮನೆಗೆ ಹೋದಾಗಾ, ಮನೆ ಹಿಂದಿನ ಗೇಟ್‌ ಹಾರಿ ಎಸ್ಕೇಪ್‌ ಆಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದೆ. ಈ ಬಗ್ಗೆ ರಿಪ್ಲೈ ಮಾಡಿರೊ ಕಲ್ಬುರ್ಗಿ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ “ಪಾಟೀಲ್‌ನ ಪೊಲೀಸರು ಹುಡುಕ್ತಿದ್ದಾರೆ. ಒಂದು ವೇಳೆ ಪೊಲೀಸರು ಈ ವಿಷಯದಲ್ಲಿ ಕಡೆಗಣಿಸಿರೋದು, ಉದ್ದೇಶ ಪೂರ್ವಕವಾಗಿ ಆತನನ್ನ ತಪ್ಪಿಸಿಕೊಳ್ಳೋಕೆ ಸಹಾಯ ಮಾಡಿರೋದು ಕಂಡು ಬಂದ್ರೆ ಕ್ರಮ ತಗೋತೀವಿ” ಅಂದಿದ್ದಾರೆ.

-masthmagaa.com

Contact Us for Advertisement

Leave a Reply