ಚೀನಾದ ಅಕ್ರಮ ಮೀನುಗಾರಿಕೆ ತಡಿಯೋಕೆ ಕ್ವಾಡ್‌ ರಾಷ್ಟ್ರಗಳ ಪ್ಲಾನ್‌! ಏನಿದು?

masthmagaa.com:

ಬಹುನಿರೀಕ್ಷಿತ ಅಮೆರಿಕ, ಭಾರತ, ಆಸ್ಟ್ರೇಲಿಯಾ, ಜಪಾನ್‌ಗಳ ಕ್ವಾಡ್‌ ರಾಷ್ಟ್ರಗಳ ಶೃಂಗಸಭೆ ಇಂದು ನಡೆದಿದೆ. ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ ನಡೆದ ಈ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಭಾರತದ ಪ್ರಧಾನಿ ನರೇಂದ್ರ ಮೋದಿ, ಜಪಾನ್‌ ಪ್ರಧಾನಿ ಫುಮಿಯೋ ಕಿಶಿದ, ಹಾಗೂ ಆಸ್ಟ್ರೇಲಿಯಾ ಪ್ರೈಂ ಮಿನಿಸ್ಟರ್‌ ಆಂಥೊನಿ ಆಲ್ಬನೀಸ್‌ ಭಾಗಿಯಾಗಿದ್ರು. ಈ ವೇಳೆ ಇಂಡೋ – ಫೆಸಿಫಿಕ್‌ ಭಾಗದಲ್ಲಿನ ಸಹಕಾರ ಕುರಿತು ಹೊಸ ಚರ್ಚೆ ಹಾಗೂ ಈ ಭಾಗದಲ್ಲಿನ ಸಂಬಂಧ ಗಟ್ಟಿಗೊಳಿಸೋ ಬಗ್ಗೆ ವಿವಿಧ ಒಪ್ಪಂದಗಳಿಗೆ ಸಹಿ ಮಾಡಲಾಗಿದೆ. ಕ್ವಾಡ್‌ ರಾಷ್ಟ್ರಗಳು ಈ ಭಾಗದಲ್ಲಿ 50 ಬಿಲಿಯನ್‌ ಅಮೆರಿಕನ್‌ ಡಾಲರ್‌ ಅಂದ್ರೆ ಸುಮಾರು 3.85 ಲಕ್ಷ ಕೋಟಿ ರೂಪಾಯಿಗಳನ್ನ ಬಂಡವಾಳ ಹೂಡುವುದಕ್ಕೆ ಯೋಜನೆ ರೂಪಿಸ್ತಿವೆ ಅಂತ ಜಪಾನ್‌ ಪ್ರಧಾನಿ ಫುಮಿಯೋ ಕಿಶಿದ ಹೇಳಿದ್ದಾರೆ. ಇನ್ನು ಇದೇ ವೇಳೆ ಚೀನಾದ ಕಾಳ ಮೀನುಗಾರಿಕೆ ಅಥವಾ ಅಕ್ರಮ ಮೀನುಗಾರಿಕೆ ಮೇಲೆ ಕಣ್ಣು ಇಡೋಕೂ ಕೂಡ ಯೋಜನೆ ರೂಪಿಸಲಾಗಿದೆ ಅಂತ ಹೇಳಲಾಗಿದೆ. ಈ ಬಗ್ಗೆ ಅಮೆರಿಕದ ಅಧ್ಯಕ್ಷೀಯ ಕಛೇರಿ ಮಾಹಿತಿ ನೀಡಿದ್ದು ಇಂಡೋ – ಫೆಸಿಫಿಕ್‌ ಭಾಗದಲ್ಲಿ ನಡೆಯುವ ಅಕ್ರಮ ಮೀನುಗಾರಿಕೆಯನ್ನ ತಡೆಯೋಕೆ ನಾವು ಕ್ವಾಡ್‌ನ ಇತರ ರಾಷ್ಟ್ರಗಳ ಜೊತೆಗೆ ಕಾರ್ಯನಿರ್ವಹಿಸ್ತೇವೆ. ತಂತ್ರಜ್ಞಾನದ ಮೂಲಕ ಅದನ್ನ ಪತ್ತೆ ಹಚ್ಚುವ ಹಾಗೂ ಅದನ್ನ ತಡೆಗಟ್ಟುವ ನಿಟ್ಟಿನಲ್ಲಿ ಯೋಜನೆ ರೂಪಿಸ್ತೀವಿ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply