ಸಶಸ್ತ್ರ ಬಂದೂಕುಧಾರಿಗಳ ಬೆದರಿಕೆಗೆ ಒಳಗಾದ ವೆಸ್ಟ್‌ ಇಂಡೀಸ್‌ ಕ್ರಿಕೆಟರ್!

masthmagaa.com:

ವೆಸ್ಟ್‌ ಇಂಡೀಸ್‌ನ ಕ್ರಿಕೆಟಿಗ ಫಾಬಿಯನ್‌ ಅಲೇನ್ ಗನ್‌ ಪಾಯಿಂಟ್‌ ಮಗ್ಗಿಂಗ್‌ ಅಂದ್ರೆ ಸಶಸ್ತ್ರ ಬಂದೂಕುಧಾರಿಗಳ ಬೆದರಿಕೆಗೆ ಒಳಗಾಗಿದ್ದಾರೆ. ಸದ್ಯ ಸೌತ್‌ ಆಫ್ರಿಕಾದ T-20 ಲೀಗ್‌ ಆಡ್ತಿರೋ ಅಲೇನ್‌, ಜೋಹಾನ್ಸ್‌ ಬರ್ಗ್‌ನ ಹೊಟೇಲ್‌ ಬಳಿ ಬೆದರಿಕೆಗೆ ಒಳಗಾಗಿದ್ದಾರೆ. ಸಶಸ್ತ್ರ ಬಂದೂಕುದಾರಿಗಳು ಅಲೇನ್‌ರನ್ನ ಗನ್‌ ಪಾಯಿಂಟ್‌ನಲ್ಲಿ ಕೂರಿಸಿ ಅವರ ಮೊಬೈಲ್‌ ಫೋನ್‌, ವೈಯಕ್ತಿಕ ವಸ್ತುಗಳು ಹಾಗೂ ಅವ್ರ ಬ್ಯಾಗ್‌ನ್ನ ಕಿತ್ಕೊಂಡ್‌ ಹೋಗಿದ್ದಾರೆ. ಸದ್ಯ ಈ ವೇಳೆ ಅವ್ರು ಅಲೆನ್‌ರಿಗೆ ಯಾವುದೇ ಹಾನಿ ಮಾಡಿಲ್ಲ. ಇನ್ನು ಘಟನೆ ಬೆನ್ನಲ್ಲೇ ಆಟಗಾರರ ಭದ್ರತೆ ಕುರಿತಂತೆ ಭಾರಿ ಕೋಲಾಹಲ ಉಂಟಾಗಿದೆ.

-masthmagaa.com

Contact Us for Advertisement

Leave a Reply