ಮಯನ್ಮಾರ್‌ ನಿರಾಶ್ರಿತರು ಗಡಿದಾಟಿ ಥೈಲ್ಯಾಂಡ್‌ಗೆ ಪರಾರಿ!

masthmagaa.com:

ಮಯನ್ಮಾರ್‌ನಲ್ಲಿ ಸೇನಾಧಿಕಾರವನ್ನ ವಿರೋಧಿಸಿ ಅಲ್ಲಿನ ಬಂಡುಕೋರ ಗುಂಪುಗಳು ಸಮರ ಸಾರ್ತಿದ್ದು, ಹಿಂಸಾಚಾರಗಳು ಜಾಸ್ತಿಯಾಗ್ತಿವೆ. ಪರಿಣಾಮ ಈಗ ನೂರಾರು ಮಯನ್ಮಾರ್‌ ನಿರಾಶ್ರಿತರು ಗಡಿದಾಟಿ ಥೈಲ್ಯಾಂಡ್‌ಗೆ ಪಲಾಯನ ಮಾಡ್ತಿದ್ದಾರೆ. ಇತ್ತೀಚಿಗೆಷ್ಟೇ ಬಂಡುಕೋರರು ಸುಮಾರು 2 ಲಕ್ಷ ಜನರಿರೋ ಮೈವಾಡ್ಡಿ ಅನ್ನೋ ನಗರವನ್ನ ವಶಕ್ಕೆ ಪಡೆದಿದ್ರು. ಅಲ್ಲಿ ತಮ್ಮ ದಾಳಿ ಜಾಸ್ತಿ ಮಾಡಿದ್ರು. ಸೋ ಸೇನೆಯ ತೀವ್ರ ದಾಳಿಯಿಂದ ತಪ್ಪಿಸಿಕೊಳ್ಳಲು ಅಲ್ಲಿನ ಜನರು ಥೈಲ್ಯಾಂಡ್‌ ಕಡೆ ಪಲಾಯನ ಆಗ್ತಿದ್ದಾರೆ. ಇದಕ್ಕೆ ರಿಯಾಕ್ಟ್‌ ಮಾಡಿರೋ ಥೈಲ್ಯಾಂಡ್‌ ವಿದೇಶಾಂಗ ಸಚಿವ, ʻನಿರಾಶ್ರಿತರ ಒಳಹರಿವಿಗೆ ನಮ್ಮ ಸರ್ಕಾರ ಸಿದ್ಧತೆ ನಡೆಸ್ತಿದೆʼ ಅಂದಿದ್ದಾರೆ. ಜೊತೆಗೆ ಮಯನ್ಮಾರ್‌ ಸೇನೆ ಹಿಂಸಾಚಾರ ನಡೆಸೋದನ್ನ ನಿಲ್ಲಿಸಿ ಅಂತಾನೂ ಒತ್ತಾಯಿಸಿದ್ದಾರೆ. ಇನ್ನು ಮಯನ್ಮಾರ್‌ನಲ್ಲಿನ ಉದ್ವಿಗ್ನತೆ ಬಗ್ಗೆ, ಭಾರತದ ವಿದೇಶಾಂಗ ಸಚಿವಾಲಯ ಭಾರತೀಯರಿಗೆ ಎಚ್ಚರಿಕೆ ನೀಡಿದೆ. ಮಯನ್ಮಾರ್‌ಗೆ ಟ್ರಾವೆಲ್‌ ಮಾಡೋರು ಸರಿಯಾಗಿ ಸುರಕ್ಷಿತಾ ಕ್ರಮಗಳನ್ನ ತಗೊಳ್ಳಿ ಅಂತ ಅಡ್ವೈಸ್‌ ಮಾಡಿದೆ. ಅಲ್ದೇ ಮಯನ್ಮಾರ್‌ನ ಸಿತವೆ (Sittwe) ನಗರದಲ್ಲಿರೋ ಭಾರತೀಯ ಕಾನ್ಸುಲೇಟ್‌ ಸಿಬ್ಬಂದಿಯನ್ನ ಸುರಕ್ಷತೆಗಾಗಿ ಸ್ಥಳಾಂತರಿಸಲಾಗಿದೆ. ಮಯನ್ಮಾರ್‌ನ ಯಾಂಗೋನ್‌ ನಗರಕ್ಕೆ ತಾತ್ಕಾಲಿಕವಾಗಿ ಶಿಫ್ಟ್‌ ಮಾಡಲಾಗಿದೆ.

-masthmagaa.com

Contact Us for Advertisement

Leave a Reply