ಹೆಣ್ಣು ಪಾಂಡಾ ಈಗ ಗಂಡಾಗಿದೆಯಂತೆ! ಏನಿದು ವಿಚಿತ್ರ?

masthmagaa.com:

ಝೂ ಒಂದ್ರಲ್ಲಿ ಹುಟ್ಟಿದಾಗ ಗಂಡು ಅಂತ ಅನ್ಕೊಂಡಿದ್ದ ದೈತ್ಯ ಪಾಂಡ ಈಗ ಹೆಣ್ಣಾಗಿ ಬದ್ಲಾಗಿರೋ ವಿಚಿತ್ರ ಘಟನೆ ನೆದರ್‌ಲ್ಯಾಂಡ್‌ನಲ್ಲಿ ನಡೆದಿದೆ. ಈ ದೈತ್ಯ ಪಾಂಡ ಹುಟ್ಟಿದಾಗ ಅದ್ರ ಲಿಂಗವನ್ನ ತಿಳಿಯೋಕೆ ಮೆಡಿಕಲ್‌ ಪರೀಕ್ಷೆ ಮಾಡೋಕೆ ಪ್ರಯತ್ನಿಸಲಾಗಿತ್ತು. ಈ ವೇಳೆ ಅನಸ್ಥೇಶಿಯಾ ಅಂದ್ರೆ ಅರವಳಿಕೆ ಕೊಟ್ಟು ಪರೀಕ್ಷಿಸಬೇಕಿತ್ತು.. ಆದ್ರೆ ಚಿಕ್ಕ ಮರಿಯಾಗಿದ್ರಿಂದ ನಾವು ಪರೀಕ್ಷೆ ಮಾಡ್ಲಿಲ್ಲ. ನೆದರ್‌ಲ್ಯಾಂಡ್‌ನಲ್ಲಿ ಹುಟ್ಟಿದ್ದ ಮೊದಲ ದೈತ್ಯ ಪಾಂಡ ಇದಾಗಿದ್ದು, ನಾವೆಲ್ಲಾ ಅದನ್ನ ಗಂಡು ಅಂತಾನೆ ಅನ್ಕೊಂಡಿದ್ವು. ಆದ್ರೆ ಇದೀಗ ಮೆಡಿಕಲ್‌ ಚೆಕ್‌ಅಪ್‌ ಮಾಡಿಸಿದಾಗ ಈ ದೈತ್ಯ ಪಾಂಡ ಹೆಣ್ಣು ಅನ್ನೋದು ಗೊತ್ತಾಗಿದೆ ಅಂತ ಝೂನ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply