ಇಸ್ಲಾಂ ವಿರೋಧಿ ನಿಲುವುಗಳಿಂದ ಡಚ್‌ ಅಧಿಪತಿಯಾಗ್ತಾರಾ ವಿಲ್ಡರ್ಸ್‌?

masthmagaa.com:

ಇತ್ತೀಚಿನ ಕೆಲವರ್ಷಗಳಲ್ಲಿ ಜಗತ್ತಿನೆಲ್ಲೆಡೆ ಬಲಪಂಥೀಯ ನಾಯಕರು ಅಧಿಕಾರಕ್ಕೇರ್ತಿದ್ದಾರೆ. ಮೊನ್ನೆ ತಾನೆ ಅರ್ಜೆಂಟೀನಾದಲ್ಲಿ ʻಅರ್ಜೆಂಟೀನಾದ ಟ್ರಂಪ್‌ʼ ಅಂತಲೇ ಫೇಮಸ್‌ ಆಗಿರೋ ಹಾವಿಯರ್‌ ಮಿಲೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ರು. ಇದೀಗ ನೆದರ್ಲೆಂಡ್ಸ್‌ನಲ್ಲಿ ಕೂಡ ಇದೇ ಅಲೆ ಕಂಟಿನ್ಯೂ ಆಗ್ತಿರೊ ಕಾಣ್ತಿದೆ. ಈ ಬಾರಿಯ ನೆದರ್‌ಲ್ಯಾಂಡ್ ಚುನಾವಣೆಯಲ್ಲಿ ರೈಟ್‌ ವಿಂಗ್‌ PVV ಪಕ್ಷ ಜಯಗಳಿಸಲಿದೆ ಅಂತ ಅಲ್ಲಿನ ಚುನಾವಣಾ ಸಮೀಕ್ಷೆಗಳು ಹೇಳ್ತಿವೆ. ನೂತನ ಪ್ರಧಾನಿಯಾಗಿ ಡಚ್‌ನ ಬಲಪಂಥೀಯ ನಾಯಕ, PVV ಲೀಡರ್‌ ಗ್ರೀಟ್‌ ವಿಲ್ಡರ್ಸ್‌ ಆಯ್ಕೆಯಾಗಲಿದ್ದಾರೆ ಅಂತ ಎಕ್ಸಿಟ್‌ ಪೋಲ್‌ ತಿಳಿಸಿದೆ. ಈ ಮೂಲಕ ಸುಮಾರು 13 ವರ್ಷಗಳ ಬಳಿಕ ನೆದರ್‌ಲ್ಯಾಂಡ್‌ ಪ್ರಧಾನಿ ಚೇಂಜ್‌ ಆಗಲಿದ್ದಾರೆ ಎನ್ನಲಾಗ್ತಿದೆ. ಇನ್ನುPVV ಪಕ್ಷ ಈಗಾಗಲೇ ಚುನಾವಣೆಯಲ್ಲಿ ಗೆದ್ರೆ ಸರ್ಕಾರಿ ಜಾಗದಲ್ಲಿನ ಇಸ್ಲಾಂಗೆ ಸಂಬಂಧಿಸಿದ ಚಟುವಟಿಕೆಗಳನ್ನ ಬ್ಯಾನ್‌ ಮಾಡ್ತೀವಿ ಅಂತ ಹೇಳಿದೆ. ಈ ರೀತಿಯ ಇಸ್ಲಾಂ ವಿರೋಧಿ ನಿಲುವುಗಳು ಹಾಗೂ EUನಿಂದ ಹೊರಬರುವ ವಿಚಾರ, ಗಡಿಯಲ್ಲಿ ವಲಸಿಗರನ್ನ ತಡೆಯುವುದಕ್ಕೆ ಅಗತ್ಯ ಕ್ರಮ ಸೇರಿದಂತೆ ಪ್ರಮುಖ ವಿಚಾರಗಳೇ ಚುನಾವಣೆಯ ಗೆಲುವಿಗೆ ಪ್ರಬಲ ಕಾರಣ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply