ದಿಲ್ಲಿಯಲ್ಲಿ ರೈತರಿಂದ ಮಹಾಪಂಚಾಯತ್‌: ರಾಷ್ಟ್ರ ರಾಜಧಾನಿಯಲ್ಲಿ ಭಿಗಿ ಭದ್ರತೆ!

masthmagaa.com:

ಸಂಯುಕ್ತ ಕಿಸಾನ್‌ ಮೋರ್ಚಾ(SKM) ಮತ್ತು ಇತರ ರೈತ ಗುಂಪುಗಳು ಇಂದು ದಿಲ್ಲಿಯ ಜಂತರ್‌ ಮಂತರ್‌ನಲ್ಲಿ ಮಹಾಪಂಚಾಯತ್‌ನ್ನ ನಡೆಸಿವೆ. ಮಹಾಪಂಚಾಯತ್‌ ಒಂದು ದಿನದ ಶಾಂತಿಯುತ ಕಾರ್ಯಕ್ರಮವಾಗಿದ್ದು, ಭರವಸೆ ನೀಡಿದಂತೆ MSP ಖಾತರಿಗಾಗಿ ಕಾನೂನು ಮಾಡ್ಬೇಕು. ವಿದ್ಯುತ್‌ ತಿದ್ದುಪಡಿ ಮಸೂದೆ-2022ರ ರದ್ದತಿ ಹೀಗೆ ಹಲವಾರು ಬೇಡಿಕೆಗಳನ್ನ ಈಡೇರಿಸುವಂತೆ ಈ ಮಹಾಪಂಚಾಯತ್‌ನ್ನ ಮಾಡಲಾಗ್ತಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ಭದ್ರತೆಯನ್ನ ಹೆಚ್ಚಿಸಲಾಗಿದೆ. ದಿಲ್ಲಿ ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನ ಹಾಕಿ, ಕಾನೂನು ಸುವ್ಯವಸ್ಥೆಯನ್ನ ನಿಯಂತ್ರಣದಲ್ಲಿಡೋಕೆ ಗಡಿ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನ ನಿಯೋಜಿಸಿದ್ದಾರೆ. ಈ ಭದ್ರತೆ ನಡುವೆಯೂ ಪ್ರತಿಭಟನೆ ನಡೆಸೋಕೆ ನೂರಾರು ರೈತರು ಆಗಮಿಸ್ತಿದಾರೆ ಅಂತ ಹೇಳಲಾಗಿದೆ. ಹಲವಾರು ರಾಜ್ಯಗಳಿಂದ ರೈತರು ಮಹಾಪಂಚಾಯತ್‌ನಲ್ಲಿ ಭಾಗವಹಿಸೋಕೆ ಜಂತರ್‌ ಮಂತರ್‌ ತಲುಪುತ್ತಿದ್ದಾರೆ.

-masthmagaa.com

Contact Us for Advertisement

Leave a Reply