ಫಾಕ್ಸ್‌ಕಾನ್‌ನಿಂದ ಬೆಂಗಳೂರಿನ ಘಟಕಕ್ಕೆ ಹೂಡಿಕೆ!

masthmagaa.com:

ತೈವಾನ್‌ ಮೂಲದ ಎಲೆಕ್ಟ್ರಾನಿಕ್ಸ್‌ ಉತ್ಪಾದಕ ಕಂಪನಿ ಫಾಕ್ಸ್‌ಕಾನ್‌ ಬೆಂಗಳೂರಿನ ತನ್ನ Foxconn Precision Engineering Private Limited ಘಟಕದಲ್ಲಿ 55.29 ಮಿಲಿಯನ್‌ ಡಾಲರ್‌ ಅಂದ್ರೆ 461 ಕೋಟಿ ರೂಪಾಯಿಯನ್ನ ಇನ್ವೆಸ್ಟ್‌ ಮಾಡಿದೆ. ಸಿಂಗಾಪೂರ್‌ನಲ್ಲಿರೊ ತನ್ನ ಅಂಗಸಂಸ್ಥೆ ಫಾಕ್ಸ್‌ಕಾನ್‌ ಸಿಂಗಾಪೂರ್‌ ಲಿಮಿಟೆಡ್‌ ಕಂಪನಿ ಮೂಲಕ ಈ ಇನ್ವೆಸ್ಟ್‌ಮೆಂಟ್‌ನ್ನ ಮಾಡಿದೆ ಅಂತ ರೆಗ್ಯುಲೇಟರಿ ಫೈಲಿಂಗ್‌ ಮೂಲಕ ತಿಳಿದು ಬಂದಿದೆ. ಅಂದ್ಹಾಗೆ ಜುಲೈನಲ್ಲಿ ದೇವನಹಳ್ಳಿಯಲ್ಲಿ 8,800 ಕೋಟಿ ವೆಚ್ಚದಲ್ಲಿ ಸಪ್ಲಿಮೆಂಟರಿ ಘಟಕವನ್ನ ಸ್ಥಾಪಿಸೋಕೆ ಫಾಕ್ಸ್‌ಕಾನ್‌ ಪ್ರಸ್ತಾವನೆ ಇಟ್ಟಿತ್ತು. ಇದರ ಭಾಗವಾಗಿ ದೇವನಹಳ್ಳಿಯಲ್ಲಿ 300 ಎಕ್ರೆ ಭೂಮಿಯನ್ನ ಕೂಡ ಖರೀದಿ ಮಾಡಿದೆ.

-masthmagaa.com

Contact Us for Advertisement

Leave a Reply