ಯುಕೇನ್​ ಮೇಲಿನ ದಾಳಿಯನ್ನ ಹೆಚ್ಚಿಸ್ತೀವಿ: ರಷ್ಯಾ ಎಚ್ಚರಿಕೆ

masthmagaa.com:

ಐವತ್ತು ದಿನಗಳನ್ನ ಮುಗಿಸಿ ಐವತ್ತೊಂದನೇ ದಿನಕ್ಕೆ ಕಾಲಿಟ್ಟಿರೋ ರಷ್ಯಾ – ಯುಕ್ರೇನ್‌ ಸಂಘರ್ಷ ಈಗ ಒಂದೊಂದೇ ಮಜಲುಗಳನ್ನ ದಾಟಿ ತೀವ್ರ ಸ್ವರೂಪ ಪಡೀತಾ ಇದೆ. ರಷ್ಯಾ ಹೊಡೆತಕ್ಕೆ ಯುಕ್ರೇನ್‌ ನೆಲ ಅಕ್ಷರಶಃ ಧಗದಗಿಸ್ತಿದ್ದು ಯುದ್ದದ ತೀವ್ರತೆಗೆ ಸಾವಿರಾರು ಜನ ಪ್ರಾಣ ಬಿಡ್ತಿದ್ದಾರೆ. ಯುಕ್ರೇನ್‌ನ ಎರಡನೇ ಅತಿದೊಡ್ಡ ನಗರವಾಗಿರೋ ಖಾರ್ಖೀವ್‌ನಲ್ಲಿ ಇಲ್ಲಿತನಕ ಸುಮಾರು 500ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಇದರಲ್ಲಿ 24 ಮಕ್ಕಳು ಸೇರಿದ್ದಾರೆ ಅಂತ ಅಲ್ಲಿನ ಗವರ್ನರ್‌ ಮಾಹಿತಿ ನೀಡಿದ್ದಾರೆ. ರಷ್ಯಾ ಸೈನಿಕರು ಖಾರ್ಖೀವ್‌ ಮೇಲೆ ವಿಪರೀತ ಪ್ರಮಾಣದಲ್ಲಿ ರಾಕೆಟ್‌ ಹಾಗೂ ಶೆಲ್ ದಾಳಿ ನಡೆಸ್ತಾಯಿದ್ದಾರೆ. ಅಲ್ದೇ ರಷ್ಯಾ ದಾಳಿಗೆ ಮನೆಗಳು, ಸೇತುವೆಗಳು ಎಲ್ಲವೂ ಕೂಡ ಸರ್ವನಾಶವಾಗ್ತಿದೆ ಅಂತ ಗವರ್ನರ್​ ಹೇಳಿದ್ದಾರೆ. ಇನ್ನು ಇದಕ್ಕೆ ಸಂಬಂಧಪಟ್ಟಂತೆ ಯುಕ್ರೇನ್‌ ಸೇನೆ ಸ್ಯಾಟಲೈಟ್‌ ಪೋಟೋಗಳನ್ನ ರೀಲಿಸ್‌ ಮಾಡಿದ್ದು ಇದರಲ್ಲಿ ಸೇತುವೆಗೆ ಸೇತುವೆಯೇ ಎರಡು ತುಂಡಾಗಿರೋದು ಕಾಣಿಸುತ್ತೆ. ಇನ್ನೊಂದ್‌ ಕಡೆ ಯುಕ್ರೇನ್‌ ರಷ್ಯಾದ ಬಾರ್ಡ್‌ರ್‌ ಬಳಿ ದಾಳಿ ಮಾಡ್ತಾ ಇದ್ದು ಸಿಟ್ಟಿಗೆದ್ದಿರೋ ರಷ್ಯಾ ಯುಕ್ರೇನ್‌ ಮೇಲಿನ ದಾಳಿ ಹೆಚ್ಚಿಸೋದಾಗಿ ಎಚ್ಚರಿಕೆ ಕೊಟ್ಟಿದೆ.

-masthmagaa.com

Contact Us for Advertisement

Leave a Reply