AbhiBus: ಯಾವುದೇ ಸ್ಥಳಕ್ಕೆ ಹೋಗಿ, ಕೇವಲ 1 ರೂಪಾಯಿ!

masthmagaa.com:

ಆನ್‌ಲೈನ್‌ ಬಸ್‌ ಟಿಕೆಟ್‌ ಬುಕಿಂಗ್‌ ಪ್ಲಾಟ್‌ಫಾರ್ಮ್‌ ಆಗಿರುವ ʻಅಭಿಬಸ್‌ʼ (AbhiBus), ಅಕ್ಟೋಬರ್‌ ತಿಂಗಳಲ್ಲಿ ಸಾಲಾಗಿ ಬರುವ ಹಬ್ಬಗಳ ಪ್ರಯುಕ್ತ ಪ್ರಯಾಣಿಕರಿಗೆ ಸಿಹಿ ಸುದ್ದಿಯನ್ನ ನೀಡಿದೆ. ಅಭಿಬಸ್‌ನಲ್ಲಿ ಯಾವುದೇ ಸ್ಥಳಕ್ಕೆ ಹೋಗೋಕೆ ಟಿಕೆಟ್‌ ಬುಕ್‌ ಮಾಡಿದ್ರೆ, ಕೇವಲ ಒಂದು ರೂಪಾಯಿ ಮಾತ್ರ ನೀವು ಖರ್ಚು ಮಾಡಬೇಕು. ಈ ಅದ್ಭುತ ಕೊಡುಗೆ ಪಡೆಯಲು ಕೇವಲ ಅಕ್ಟೋಬರ್‌ 19 ರಿಂದ 15 ರವರೆಗೆ ಮಾತ್ರ ಅವಕಾಶ. ಆದ್ರೆ ಈ ಆಫರ್‌ ಎಲ್ಲರಿಗೂ ಅಪ್ಲೈ ಆಗೋದಿಲ್ಲ. ʼಆಭಿಬಸ್‌ʼ ಸೈಟ್‌ನಲ್ಲಿ ಕೂಪನ್‌ ಕೋಡ್‌ ಹಾಕಿದ ನಂತರ, ರ‍್ಯಾಂಡಮ್‌ ಆಗಿ ಆಯ್ಕೆಗೊಂಡ ಅದೃಷ್ಟವಂತರು ಮಾತ್ರ ಈ ಆಫರ್‌ ಪಡೆಯಬಹುದಾಗಿದೆ. ಅಕ್ಟೋಬರ್‌ ತಿಂಗಳಲ್ಲಿ ಬಹಳಷ್ಟು ಮಂದಿಗೆ ಹಬ್ಬದ ಪ್ರಯುಕ್ತ ಸಾಲು ಸಾಲು ರಜೆ ಸಿಗುವ ಕಾರಣದಿಂದ ಈ ಆಫರ್‌ ನೀಡಲಾಗಿದೆ. ಈ ಸಂದರ್ಭದಲ್ಲಿ ಜನರು ತಮ್ಮ ಊರುಗಳಿಗೆ ಹಬ್ಬವನ್ನ ಆಚರಿಸೋದಕ್ಕೆ ಹೋಗೋದು ಸಾಮಾನ್ಯ. ಏಳು ದಿನಗಳವರೆಗೆ ನೀಡಲಾದ ಈ ಬಂಪರ್‌ ಗಿಫ್ಟ್‌ ಪ್ರಯಾಣಿಕರ ಮುಖದಲ್ಲಿ ನಗು ಮೂಡಿಸಿದೆ. ಹೆಚ್ಚಾಗಿ, ಹಬ್ಬದ ಪ್ರಯುಕ್ತ Amazon, Flipkart, Myntra ಗಳಂತಹ ಆನ್‌ಲೈಟ್‌ ಶಾಪಿಂಗ್‌ ಸೈಟ್ಸ್‌ಗಳಲ್ಲಿ ಈ ರೀತಿಯ ಆಫರ್‌ಗಳನ್ನ ಕಾಣಬಹುದು. ಆದ್ರೆ ಸಾರಿಗೆ ವ್ಯವಸ್ಥೆಯಲ್ಲಿ, ಇಂಥ ಟೈಮ್‌ನಲ್ಲಿ ಆಫರ್‌ ಕನಸು ಕಾಣೋದೆ ಬೇಡ. ಸಾಮಾನ್ಯಕ್ಕಿಂತಲೂ ಅಧಿಕ ರೇಟ್‌ನಲ್ಲಿ ಟಿಕೆಟ್‌ ಬೆಲೆಯನ್ನ ನಿಗಧಿ ಪಡಿಸಿರುತ್ತಾರೆ. ಆದ್ರೆ ʻಅಭಿಬಸ್‌ʼ, ನಾವು ಸ್ವಲ್ಪ ಡಿಫರೆಂಟ್‌ ಅನ್ನೋ ಹಾಗೆ ತನ್ನ ಟಿಕೆಟ್‌ ಬೆಲೆಯಲ್ಲಿ ಆಫರ್‌ ನೀಡಿದೆ.

-masthmagaa.com

Contact Us for Advertisement

Leave a Reply