2034ರ ಫಿಫಾ ವಲ್ಡ್‌ಕಪ್‌ ಆತಿಥ್ಯವನ್ನ ಯಾರು ವಹಿಸಲಿದ್ದಾರೆ?

masthmagaa.com:

2034ರ ಫುಟ್‌ಬಾಲ್‌ ವಿಶ್ವಕಪ್‌ (ಫಿಫಾ) ಆತಿಥ್ಯವನ್ನ ಸೌದಿ ಅರೇಬಿಯಾ ವಹಿಸಲಿದೆ. ಆಸ್ಟ್ರೇಲಿಯನ್‌ ಫುಟ್‌ಬಾಲ್‌ ಫೆಡರೇಶನ್‌ ಬಿಡ್ಡಿಂಗ್‌ ಪ್ರಕ್ರಿಯೆಯಲ್ಲಿ ಭಾಗಿಯಾಗದ ಕಾರಣ 2034ರ ಫಿಫಾ ವರ್ಲ್ಡ್‌ಕಪ್‌ ಆತಿಥ್ಯವನ್ನ ಸೌದಿ ಅರೇಬಿಯಾಗೆ ವಹಿಸಲಾಗಿದೆ. ಈ ಕುರಿತು ಫಿಫಾ ಅಧ್ಯಕ್ಷ ಗಿಯಾನ್ನಿ ಇನ್‌ಫಾಂಟಿನೋ ತಿಳಿಸಿದ್ದಾರೆ. ಅಂದ್ಹಾಗೆ ಫಿಫಾ ವರ್ಲ್ಡ್‌ಕಪ್‌ 2030ರ ಆತಿಥ್ಯವನ್ನ ಮೊರಾಕೊ, ಪೋರ್ಚುಗಲ್‌ ಮತ್ತು ಸ್ಪೇನ್‌ಗೆ ವಹಿಸೋದಾಗಿ ಫಿಫಾ ನಿರ್ಧರಿಸಿದ ಬೆನ್ನಲ್ಲೇ 20234 ಫಿಫಾ ಆತಿಥ್ಯವನ್ನ ಸೌದಿ ಅರೇಬಿಯಾ ವಹಿಸೋದು ಖಚಿತವಾಗಿದೆ.

-masthmagaa.com

Contact Us for Advertisement

Leave a Reply