ಫಿಫಾ ವಿಶ್ವಕಪ್:‌ ಮ್ಯಾಚ್‌ ವೇಳೆ ರಾಷ್ಟ್ರಗೀತೆಯನ್ನ ಹಾಡದ ಇರಾನ್‌ ಆಟಗಾರರು, ಏಕೆ?

masthmagaa.com:

ಕತಾರ್‌ನಲ್ಲಿ ನಡಿತಿರೊ ಫಿಫಾ ವಿಶ್ವಕಪ್‌ನಲ್ಲೂ ಇರಾನ್‌ನ ಹಿಜಬ್‌ ಕಿಚ್ಚು ಗೋಚರಿಸಿದೆ. ಇರಾನ್‌ನ ಫುಟ್ಬಾಲ್‌ ಆಟಗಾರರು ಇಂಗ್ಲೆಂಡ್‌ ವಿರುದ್ದ ತಮ್ಮ ಮೊದಲ ಪಂದ್ಯದ ವೇಳೆ ರಾಷ್ಟ್ರಗೀತೆಯನ್ನ ಹಾಡೋಕೆ ನಿರಾಕಸಿದ್ದಾರೆ. ಇರಾನ್‌ನಲ್ಲಿ ಹಿಜಬ್‌ ಪ್ರತಿಭಟನಾಕಾರರಿಗೆ ತಮ್ಮ ಬೆಂಬಲ ಸೂಚಿಸೋ ನಿಟ್ಟಿನಲ್ಲಿ ಆಟಗಾರರು ತಮ್ಮ ರಾಷ್ಟ್ರಗೀತೆಯನ್ನ ಹಾಡಿಲ್ಲ. ಇನ್ನು ಮ್ಯಾಚ್‌ ವಿಚಾರಕ್ಕೆ ಬಂದ್ರೆ ಇಂಗ್ಲೆಂಡ್‌ 6-2 ಅಂತರದಲ್ಲಿ ಇರಾನ್‌ ವಿರುದ್ದ ಜಯ ಸಾಧಿಸಿದೆ. ಅತ್ತ ಸೆನೆಗಲ್‌ ವಿರುದ್ದ ನೆದರ್‌ಲ್ಯಾಂಡ್ಸ್‌ 2 ಗೋಲುಗಳ ಅಂತರದಲ್ಲಿ ಗೆದ್ದಿದೆ. ಇನ್ನು ಇಂದು ಬೆಳಿಗ್ಗೆ ನಡೆದ ಅಮೆರಿಕ ಹಾಗೂ ವೇಲ್ಸ್‌ ಪಂದ್ಯ ಡ್ರಾ ಆಗಿದೆ.

-masthmagaa.com

Contact Us for Advertisement

Leave a Reply