ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಡಿಕೆಶಿ ವಿರುದ್ದ FIR ದಾಖಲು!

masthmagaa.com:

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಅಂತೇಳಿ ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ದ FIR ದಾಖಲಾಗಿದೆ ಅಂತ ಚುನಾವಣಾ ಆಯೋಗ ಹೇಳಿದೆ. ಮತಯಾಚನೆ ವೇಳೆ ಬೆಂಗಳೂರಿನ RR ನಗರ ನಿವಾಸಿಗಳಿಗೆ ನೀರು ಸರಬರಾಜು ಮಾಡೊದಾಗಿ ಡಿಕೆಶಿ ಭರವಸೆ ನೀಡಿ, ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಅಂತ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿತ್ತು. ಹೀಗಾಗಿ RMC ಯಾರ್ಡ್‌ ಪೋಲಿಸ್‌ ಠಾಣೆಯಲ್ಲಿ FIR ದಾಖಲಿಸಲಾಗಿದೆ ಅಂತ ಆಯೋಗ ತಿಳಿಸಿದೆ. ಇನ್ನೊಂದು ಕಡೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ದಿಂಗಾಲೇಶ್ವರ ಸ್ವಾಮೀಜಿ ಈಗ ತಮ್ಮ ನಾಮಪತ್ರವನ್ನ ವಾಪಾಸ್‌ ಪಡ್ಕೊಂಡಿದ್ದಾರೆ. ಅತ್ತ ಶಿವಮೊಗ್ಗದಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿರೋ ಈಶ್ವರಪ್ಪರಿಗೆ ಚುನಾವಣಾ ಆಯೋಗ ಚಿಹ್ನೆ ನೀಡಿದೆ. ರೈತ ಮತ್ತು ಕಬ್ಬು ಇರೋ ಚಿಹ್ನೆ ನೀಡಲಾಗಿದೆ.

-masthmagaa.com

Contact Us for Advertisement

Leave a Reply