ಪಾಕ್‌: ಗುಪ್ತಚರ ಸಂಸ್ಥೆ ISI ವಿರುದ್ದ ಆರೋಪ ಮಾಡಿದ ಹೈಕೋರ್ಟ್‌

masthmagaa.com:

ಪಾಕಿಸ್ತಾನದಲ್ಲಿ ಇದೀಗ ಪಾಕ್‌ ಗುಪ್ತಚರ ಸಂಸ್ಥೆ ISI ಮತ್ತು ಅಲ್ಲಿನ ನ್ಯಾಯಂಗದ ನಡುವೆ ಸಮರ ಶುರುವಾಗಿದೆ. ಯಾಕಂದ್ರೆ ಪಾಕ್‌ನಲ್ಲಿರೋ 8 ಹೈಕೋರ್ಟ್‌ಗಳ ಪೈಕಿ 6 ಹೈಕೋರ್ಟ್‌ಗಳು ISI ವಿರುದ್ದ ಆರೋಪ ಮಾಡಿದ್ವು. ISI ನ್ಯಾಯಾಂಗ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡ್ತಿದೆ. ಹೈಕೋರ್ಟ್‌ ಜಡ್ಜ್‌ಗಳಿಗೆ ಪ್ರೆಷರ್ ಹೇರ್ತಿದೆ. ನ್ಯಾಯಾಧೀಶರ ಸಂಬಂಧಿಕರನ್ನ ಅಪಹರಣ ಮಾಡಿ…ಅವ್ರಿಗೆ ಟಾರ್ಚರ್‌ ನೀಡಲಾಗ್ತಿದೆ ಅಂತ ಅಲ್ಲಿನ 6 ಹೈಕೋರ್ಟ್‌ಗಳು ಪಾಕ್‌ ಸುಪ್ರೀಂ ಕೋರ್ಟ್‌ಗೆ ಲೆಟರ್‌ ಬರೆದು ಆರೋಪ ಮಾಡಿದ್ವು. ಅದಕ್ಕೆ ಸಂಬಂಧಪಟ್ಟಂತೆ ಈಗ ಪಾಕ್‌ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಿ ಮಹತ್ವದ ತೀರ್ಪು ನೀಡಿದೆ. ʻಪಾಕ್‌ನ ನ್ಯಾಯಾಂಗ ವ್ಯವಸ್ಥೆಯ ಸುತ್ತಲೂ ʻಫೈಯರ್‌ ವಾಲ್‌ʼ ಡೆವಲಪ್‌ ಮಾಡ್ಬೇಕು ಅಂದ್ರೆ ಬಲವಾದ ನೆಟ್‌ವರ್ಕ್‌ ಸೆಕ್ಯುರಿಟಿ ಒದಗಿಸ್ಬೇಕು. ನ್ಯಾಯಾಂಗದ ವ್ಯವಹಾರಗಳಲ್ಲಿ ಯಾವ್ದೇ ಬಾಹ್ಯ ಶಕ್ತಿಗಳು ಇರಬಾರದು. ಹಸ್ತಕ್ಷೇಪಗಳು ಆಗದಂತೆ ತಡೆಗಟ್ಟಬೇಕುʼ ಅಂತ ಆದೇಶಿಸಿದೆ. ಈ ಮೂಲಕ ಪಾಕ್‌ನ ಸುಪ್ರೀಂ ಕೋರ್ಟ್‌ ಕೂಡ ಐಎಸ್‌ಐ ವಿರುದ್ದ ತಿರುಗಿಬಿದ್ದಂತಾಗಿದೆ. ಯಾಕಂದ್ರೆ ಈ ಮುಂಚೆಯಿಂದಲೂ ಪಾಕಿಸ್ತಾನದ ಐಎಸ್‌ಐ ಮೇಲೆ ಈ ರೀತಿಯ ಆರೋಪ ಇತ್ತು. ಆದ್ರೆ ಅಲ್ಲಿನ ಸುಪ್ರೀಂ ಕೋರ್ಟ್‌ ಕೂಡ ಐಎಸ್‌ಐ ಪ್ರಭಾವಕ್ಕೆ ಒಳಪಡೋದ್ರಿಂದ ಅದರ ಬಗ್ಗೆ ಇಷ್ಟು ದಿನ ಸುಪ್ರೀಂ ಗಟ್ಟಿಯಾಗಿ ಮಾತಾಡಿರಲಿಲ್ಲ. ಹಾಗಂತ ಈಗಲೂ ಐಎಸ್‌ಐ ಮೇಲೆ ಅಲ್ಲಿನ ಕೋರ್ಟ್‌ ನೇರವಾಗಿ ಕ್ರಮ ತಗೊಂಡಿಲ್ಲ. ಬದಲಾಗಿ ನ್ಯಾಯಾಂಗದ ವ್ಯವಹಾರಗಳಲ್ಲಿ ತಲೆಹಾಕಬೇಡಿ ಅಂತೇಳೋ ಮೂಲಕ ಐಎಸ್‌ಐಗೆ ಪರೋಕ್ಷವಾಗಿ ಹೇಳಿದೆ. ಇದನ್ನ ಐಎಸ್‌ಐ ಎಷ್ಟರ ಮಟ್ಟಿಗೆ ಪಾಲಿಸುತ್ತೆ ಅನ್ನೋದೇ ಮುಂದಿರೋ ಪ್ರಶ್ನೆ.. ಇನ್ನು ಈ ಕುರಿತು ಇದುವರೆಗೂ ಐಎಸ್‌ಐ ಯಾವುದೇ ಹೇಳಿಕೆ ಕೊಟ್ಟಿಲ್ಲ.

-masthmagaa.com

Contact Us for Advertisement

Leave a Reply