ಗಂಟುಮೂಟೆ ಕಟ್ಟಿದ ಭಾರತ! ಮಾಲ್ಡೀವ್ಸ್‌ಗೆ ಹೊಸ ನುರಿತ ತಂಡ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಮಾಲ್ಡೀವ್ಸ್‌ನಿಂದ ಭಾರತೀಯ ಪಡೆಗಳು ತಮ್ಮ ತಾಯ್ನಾಡಿಗೆ ಹಿಂದಿರುಗಿದ್ದಾರೆ. ಇವ್ರ ಬದಲಿಗೆ ಉಭಯ ದೇಶಗಳ ಒಪ್ಪಂದದಂತೆ ಭಾರತದ ಟೆಕ್ನಿಕಲ್‌ ತಂಡವನ್ನ ರಿಪ್ಲೇಸ್‌ ಮಾಡಲಾಗಿದೆ. ಹೀಗಂತ ಖುದ್ದು ಮಾಲ್ಡೀವ್ಸ್‌ ರಕ್ಷಣಾ ಸಚಿವಾಲಯ ಫೆಬ್ರುವರಿ 26 ರಂದು ಮಾಹಿತಿ ಹಂಚಿಕೊಂಡಿದೆ. ಮಾಲ್ಡೀವ್ಸ್‌ನ ಏರ್‌ಪೋರ್ಟ್‌ಗೆ ಭಾರತೀಯ ʻಟೆಕ್ನಿಕಲ್‌ ತಂಡʼ ಬಂದು ಲ್ಯಾಂಡ್‌ ಆಗಿದೆ. ಸದ್ಯ ಮೊದಲ ತಂಡವನ್ನ ನೇಮಿಸೋ ಪ್ರಕ್ರಿಯೆ ನಡೀತಿದೆ. ಭಾರತೀಯ ಸೇನಾ ಪಡೆ ತಮ್ಮ ಹಸ್ತಾಂತರ ಪ್ರಕ್ರಿಯೆಯನ್ನ ಸ್ಟಾರ್ಟ್‌ ಮಾಡಿವೆ. ಈ ಮೂಲಕ ಮಾಲ್ಡೀವ್ಸ್‌ನ ಮೆಡಿಕಲ್‌ ಎಮರ್ಜೆನ್ಸಿಗಾಗಿ ಭಾರತ ನೀಡಿರೋ ಹೆಲಿಕಾಪ್ಟರ್‌ನ್ನ ಇನ್ಮುಂದೆ ಈ ನುರಿತ ತಂಡ ಹ್ಯಾಂಡಲ್‌ ಮಾಡಲಿದೆ ಅಂತ ಮಾಲ್ಡೀವ್ಸ್ ರಕ್ಷಣಾ ಸಚಿವಾಲಯ ಹೇಳಿದೆ. ಜೊತೆಗೆ ಈಗ ಇರೋ ಹೆಲಿಕಾಪ್ಟರ್‌ನನ್ನೂ ಭಾರತಕ್ಕೆ ಕಳುಹಿಸಲಾಗುತ್ತೆ. ಇದ್ರ ಬದಲಿಗೆ ಮತ್ತೊಂದು ಹೆಲಿಕಾಪ್ಟರ್‌ ಫೆಬ್ರುವರಿ 28 ರಂದು ಭಾರತದಿಂದ ಬಂದು ಮಾಲ್ಡೀವ್ಸ್‌ನಲ್ಲಿ ಲ್ಯಾಂಡ್‌ ಆಗಲಿದೆ ಅಂತ ಮಾಲ್ಡೀವ್ಸ್‌ ತಿಳಿಸಿದೆ. ಫೆಬ್ರುವರಿ 02ರಂದು ಉಭಯ ದೇಶಗಳ ನಡುವೆ ಒಂದು ಒಪ್ಪಂದ ಆಗಿತ್ತು. ಇದರ ಪ್ರಕಾರ ಮಾಲ್ಡೀವ್ಸ್‌ನಲ್ಲಿರೋ 3 ಏವಿಯೇಷನ್‌ ಪ್ಲಾಟ್‌ಫಾರ್ಮ್‌ಗಳ ಪೈಕಿ ಮೊದಲ ಪ್ಲಾಟ್‌ಫಾರ್ಮ್‌ಗೆ ಮಾರ್ಚ್‌ 10ರ ಒಳಗೆ ಸೇನಾ ಪಡೆಯನ್ನ ರಿಪ್ಲೇಸ್‌ ಮಾಡೋದಾಗಿ ಹೇಳಲಾಗಿತ್ತು. ಅದ್ರಂತೆಯೇ ಇದೀಗ ರಿಪ್ಲೇಸ್‌ಮೆಂಟ್‌ ಪ್ರಕ್ರಿಯೆ ನಡೀತಿದೆ. ಇನ್ನುಳಿದ ಎರಡು ಪ್ಲಾಟ್‌ಫಾರ್ಮ್ಸ್‌ಗೆ ಮೇ 10ರ ಒಳಗೆ ರಿಪ್ಲೇಸ್‌ಮೆಂಟ್‌ ಆಗಲಿದೆ. ಅಂದ್ಹಾಗೆ ಕಳೆದ ವರ್ಷ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಝು ಸರ್ಕಾರ ಅಧಿಕಾರಕ್ಕೆ ಬಂದಾಗ್ಲೇ… ಅಲ್ಲಿರೋ ಭಾರತೀಯ ಸೇನಾ ಪಡೆ ವಾಪಾಸ್‌ ಭಾರತಕ್ಕೆ ಹೋಗ್ಬೇಕು ಅಂತ ಒಂದೇ ಹಠ ಮಾಡ್ತಲೇ ಬಂದಿದ್ರು. ಸಾಂಪ್ರಾದಾಯಿಕವಾಗಿ ಭಾರತಕ್ಕೆ ಬಹಳ ಕ್ಲೋಸ್‌ ಆಗಿದ್ದ ಮಾಲ್ಡೀವ್ಸ್‌, ಮುಯಿಝು ಸರ್ಕಾರ ಬಂದ್ಮೇಲೆ ಭಾರತದ ವಿರೋಧ ನಿಲ್ಲೋಕೆ ಶುರು ಮಾಡ್ತು. ಚೀನಾ ಮಾತು ಕೇಳ್ತಾ… ತನ್ನ ಫಾರಿನ್‌ ಪಾಲಿಸಿನೇ ಬದಲಾಯಿಸ್ಕೊಳ್ತು. ಚೀನಾ ಜೊತೆ ಇನ್ನಷ್ಟು ಹತ್ತಿರವಾಯ್ತು. ಇವೆಲ್ಲದ್ರ ನಡುವೆ ಮೋದಿ ಲಕ್ಷದ್ವೀಪಕ್ಕೆ ಭೇಟಿ ಕೊಟ್ಟ ನಂತ್ರವಂತೂ ಭಾರತ-ಮಾಲ್ಡೀವ್ಸ್‌ ನಡುವೆ ದೊಡ್ಡ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಯ್ತು. ಮಾಲ್ಡೀವ್ಸ್‌ನ ಸಂಸದರು ಭಾರತದ ಪ್ರಧಾನಿ ವಿರುದ್ದ ಕೆಟ್ಟದಾಗಿ ಮಾತಾಡಿದ್ರು.

ಮಾಲ್ಡೀವ್ಸ್‌ ವಿರುದ್ಧ ಭಾರತದಲ್ಲಿ ʻಬಾಯ್‌ಕಾಟ್‌ ಮಾಲ್ಡೀವ್ಸ್‌ʼ ಕೂಗು ಕೇಳೋಕೆ ಶುರುವಾದ್ವು. ಇದ್ರಿಂದ ಮಾಲ್ಡೀವ್ಸ್‌ ಟೂರಿಸಂಗೆ ಭಾರೀ ಹೊಡೆತ ಕೂಡ ಬಿತ್ತು. ಅಲ್ಲಿನ ಸರ್ಕಾರ ಮತ್ತು ವಿಪಕ್ಷಗಳ ನಡುವೆನೇ ಕಿತ್ತಾಟ ಶುರುವಾದ್ವು. ಭಾರತ ವಿರುದ್ಧ ನಿಂತ ಮೊಯಿಝು ಸರ್ಕಾರದ ವಿರುದ್ಧ ಅಲ್ಲಿನ ವ್ಯಾಪಾರಿಗಳೇ ಛೀಮಾರಿ ಹಾಕೋಕೆ ಸ್ಟಾರ್ಟ್‌ ಮಾಡಿದ್ರು. ಆದ್ರೂ ಮಾಲ್ಡೀವ್ಸ್‌ ಸರ್ಕಾರ ಚೀನಾ ಹಿಂದೆ ಬಾಲ ಅಲ್ಲಾಡಿಸ್ಕೊಂಡು ಹೋಗೋದು ಮಾತ್ರ ಕಂಟಿನ್ಯೂ ಮಾಡ್ತು. ಪುನಃ ಪುನಃ ಮುಯಿಝು ಭಾರತೀಯ ಸೇನಾ ಪಡೆ ವಾಪಾಸ್‌ ಹೋಗೋ ವಿಚಾರವಾಗಿ ಸ್ವರ ಎತ್ತುತಲೇ ಹೋದ್ರು. ಅದಾದ ಮೇಲೆ ಎರಡೂ ದೇಶಗಳು ಮಾತುಕತೆ ಮಾಡಿದ್ವು ಮಾಲ್ಡೀವ್ಸ್‌ ಸರ್ಕಾರದ ಪ್ರಮುಖರೊಂದಿಗೆ ಭಾರತ ಮೀಟಿಂಗ್‌ ನಡೆಸ್ತು. ಈ ಒಪ್ಪಂದದ ಪ್ರಕಾರ ಮಾಲ್ಡಿವ್ಸ್‌ನಲ್ಲಿರೋ ಭಾರತೀಯ ಸೇನಾ ಪಡೆಯನ್ನ ರಿಪ್ಲೇಸ್‌ ಮಾಡಿ ಅಲ್ಲಿಗೆ ಭಾರತದ ʻನುರಿತ ತಂಡʼವನ್ನ ನೇಮಿಸೋ ಬಗ್ಗೆ ಒಪ್ಪಿಕೊಳ್ಳಲಾಯ್ತು. ಈಗ ರಿಪ್ಲೇಸ್‌ ಮಾಡೋ ಕೆಲಸ ಆರಂಭವಾಗಿದೆ.

-masthmagaa.com

Contact Us for Advertisement

Leave a Reply