ಮೊಟ್ಟಮೊದಲ ಬಾರಿಗೆ ಐರಿಸ್‌, ಮಲೀನಾ ಎಂಬ ಕ್ಷುದ್ರ ಗ್ರಹಗಳಲ್ಲಿ ನೀರು ಪತ್ತೆ!

masthmagaa.com:

ಬಾಹ್ಯಾಕಾಶದಿಂದ ಅಚ್ಚರಿಯ ಮಾಹಿತಿಯೊಂದು ಬಹಿರಂಗವಾಗಿದೆ. ಇದೇ ಮೊದಲ ಬಾರಿಗೆ ಕ್ಷುದ್ರಗ್ರಹಗಳಲ್ಲಿ ನೀರಿನ ಅಂಶ ಪತ್ತೆಯಾಗಿದೆ. ಐರಿಸ್‌ (Iris) ಮತ್ತು ಮಲಿಸ್ಸಾ (Malissa) ಹೆಸರಿನ ಎರಡು ಕ್ಷುದ್ರಗ್ರಹಗಳ ಮೇಲ್ಮೈನಲ್ಲಿ ನೀರಿನ ಅಣುಗಳು ಅಥ್ವಾ ಮಾಲೆಕ್ಯುಲ್ಸ್‌ ಟ್ರ್ಯಾಪ್‌ ಪತ್ತೆಯಾಗಿದೆ. ಈ ಹೊಸ ಡಿಸ್ಕವರಿಯಿಂದ, ನೀರು ನಮ್ಮ ಭೂಮಿಯನ್ನ ಹೇಗೆ ರೀಚ್‌ ಆಯ್ತು…ಪತ್ತೆ ಹೇಗಾಯ್ತು ಅನ್ನೋ ಬಗ್ಗೆ ತಿಳಿದುಕೊಳ್ಳೋಕೆ ವಿಜ್ಞಾನಿಗಳಿಗೆ ಸಾಕಷ್ಟು ಹೆಲ್ಪ್‌ ಆಗಲಿದೆ ಅಂತ ತಜ್ಞರು ಹೇಳಿದ್ದಾರೆ. ಇನ್ನು ನೀರಿನ ಅಣುಗಳು ಪತ್ತೆಯಾಗಿರೋ ಈ ಎರಡೂ ಕ್ಷುದ್ರಗ್ರಹಗಳು ಸಿಲಿಕೇಟ್‌ಗಳಿಂದ ಸಮೃದ್ಧವಾಗಿದ್ದು ಈ ಸಿಲಿಕೇಟ್‌ ಗ್ಲಾಸ್‌ನಲ್ಲೇ ಈ ನೀರಿನ ಅಣುಗಳು ಪತ್ತೆಯಾಗಿವೆ. ಈ ಹೊಸ ಸಂಶೋಧನೆಯನ್ನThe Planetary Science Journal ಪಬ್ಲಿಶ್‌ ಮಾಡಿದೆ. ಸ್ಟ್ರಾಟೋಸ್ಫೆರಿಕ್‌ ಆಬ್ಸರ್ವೇಟರಿ ಫಾರ್‌ ಇನ್ಫ್ರಾರೆಡ್‌ ಆಸ್ಟ್ರೋನಮಿ (Stratospheric Observatory for Infrared Astronomy) ಅಥ್ವಾ SOFIA ಟೆಲಿಸ್ಕೋಪ್‌ ಈ ಮಾಹಿತಿಯನ್ನ ಕೊಟ್ಟಿತ್ತು. ಈ ಹಿಂದೆ ಇದೇ SOFIA ಟೆಲಿಸ್ಕೋಪ್‌ ಬಳಸಿ ಚಂದ್ರನ ದಕ್ಷಿಣ ಭಾಗದಲ್ಲಿ ನೀರಿರೋದನ್ನ ಡಿಟೆಕ್ಟ್‌ ಮಾಡಲಾಗಿತ್ತು. ನಾಸಾ ಮತ್ತು ಜರ್ಮನ್‌ ಏರೋಸ್ಪೇಸ್‌ ಸೆಂಟರ್‌ನಿಂದ ಕಾರ್ಯಚರಿಸ್ತಿದ್ದ ಈ ಟೆಲಿಸ್ಕೋಪ್‌…ಇದೀಗ ತನ್ನೆಲ್ಲಾ ಕೆಲಸ ಮುಗಿಸಿ ರಿಟೈರ್‌ ಆಗಿದೆ. ಇದೇ ಹೊತ್ತಲ್ಲಿ ಬಾಹ್ಯಾಕಾಶ ಅಚ್ಚರಿಯ ಮಾಹಿತಿಯನ್ನ ಕಲೆಕ್ಟ್‌ ಮಾಡಿದೆ.

-masthmagaa.com

Contact Us for Advertisement

Leave a Reply