ಕರ್ನಾಟಕಕ್ಕೂ ಕಾಲಿಟ್ಟ ಝೀಕಾ ವೈರಸ್‌, ಮೊದಲ ಕೇಸ್‌ ಪತ್ತೆ!

masthmagaa.com:

ಕೇರಳದಲ್ಲಿ ಪತ್ತೆಯಾಗಿ ಭೀತಿ ಹುಟ್ಟಿಸಿದ್ದ ಝೀಕಾ ವೈರಸ್‌ ಇದೀಗ ರಾಜ್ಯಕ್ಕೂ ಕಾಲಿಟ್ಟಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಅನ್ನೋ ಗ್ರಾಮದಲ್ಲಿ ಮೊದಲ ಝೀಕಾ ವೈರಸ್‌ ಪ್ರಕರಣ ದಾಖಲಾಗಿದೆ. ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ 5 ವರ್ಷದ ಬಾಲಕಿಗೆ ಝೀಕಾ ವೈರಸ್‌ ಜ್ವರ ದೃಢಪಟ್ಟಿತ್ತು. ಚಿಕಿತ್ಸೆ ನಂತರ ಈಗ ಬಾಲಕಿ ಗುಣಮುಖಳಾಗಿದ್ದಾಳೆ ಅಂತ ವೈದ್ಯರು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಆರೋಗ್ಯ ಸಚಿವ ಕೆ. ಸುಧಾಕರ್‌ ಇದು ರಾಜ್ಯದ ಮೊದಲ ಝೀಕಾ ವೈರಸ್‌ ಕೇಸ್‌ ಆಗಿದ್ದು, ವೈರಸ್‌ನ್ನ ತಡೆಗಟ್ಟೋಕೆ ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗಿದೆ ಅಂತ ಹೇಳಿದ್ದಾರೆ.) ಜೊತೆಗೆ ರಾಯಚೂರು ಹಾಗೂ ನೆರೆ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸೋಕೆ ಸೂಚನೆ ನೀಡಲಾಗಿದೆ. ಝೀಕಾ ವೈರಸ್‌ ಸೋಂಕಿನ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಝೀಕಾ ವೈರಸ್‌ ಸೋಂಕಿನ ಬಗ್ಗೆ ಪ್ರತ್ಯೇಕ ಗೈಡ್‌ಲೈನ್ಸ್ ರಿಲೀಸ್ ಮಾಡಲಾಗುತ್ತೆ ಅಂತ ಆರೋಗ್ಯ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply