ಬ್ರಿಟನ್:‌ ವಿಶ್ವದ ಅತ್ಯುತ್ತಮ ಶಾಲಾ ಪ್ರಶಸ್ತಿಗಳ ಪಟ್ಟಿಯಲ್ಲಿ ಭಾರತದ 5 ಶಾಲೆಗಳು

masthmagaa.com:

ಬ್ರಿಟನ್‌ ನೀಡಲಿರುವ ವಿಶ್ವದ ಅತ್ಯುತ್ತಮ ಶಾಲಾ ಪ್ರಶಸ್ತಿಗಳ ಪಟ್ಟಿಯಲ್ಲಿ ಭಾರತದ 5 ಶಾಲೆಗಳು ಆಯ್ಕೆಯಾಗಿವೆ. 2023ರ ವಿಶ್ವದ ಅತ್ಯುತ್ತಮ ಶಾಲಾ ಪ್ರಶಸ್ತಿಗಳಿಗೆ ಟಾಪ್‌ 10 ಸ್ಕೂಲ್‌ಗಳ ಪಟ್ಟಿಯನ್ನ ರಿಲೀಸ್‌ ಮಾಡಲಾಗಿದೆ. ಅದ್ರಲ್ಲಿ ದಿಲ್ಲಿ, ಗುಜರಾತ್‌ ಹಾಗೂ ಮಹಾರಾಷ್ಟ್ರದ 5 ಶಾಲೆಗಳು ವಿವಿಧ ವಿಭಾಗಗಳಲ್ಲಿ ಸ್ಥಾನ ಪಡೆದುಕೊಂಡಿವೆ. ಸಮುದಾಯ ಸಹಯೋಗ ವಿಭಾಗದಲ್ಲಿ ದಿಲ್ಲಿಯ ನಗರ್‌ ನಿಗಮ್‌ ಪ್ರತಿಭಾ ಬಾಲಿಕಾ ವಿದ್ಯಾಲಯ ಹಾಗೂ ಮುಂಬೈನ ಒಬೆರಾಯ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ಆಯ್ಕೆ ಆದ್ರೆ, ಆವಿಷ್ಕಾರ ವಿಭಾಗದಲ್ಲಿ ಗುಜರಾತ್‌ನ ಅಹಮದಾಬಾದ್‌ನ ದಿ ರಿವರ್‌ಸೈಡ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌, ಪ್ರತಿಕೂಲ ಪರಿಸ್ಥಿತಿ ತಗ್ಗಿಸುವಿಕೆ (Overcoming Adversity) ವಿಭಾಗದಲ್ಲಿ ಮಹಾರಾಷ್ಟ್ರದ ಸ್ನೇಹಾಲಯ ಇಂಗ್ಲೀಷ್‌ ಮೀಡಿಯಂ ಸ್ಕೂಲ್‌ ಹಾಗೂ ಆರೋಗ್ಯಯುತ ಜೀವನ ನಿರ್ವಹಣೆಗೆ ಬೆಂಬಲ ವಿಭಾಗದಲ್ಲಿ ಮುಂಬೈನ್‌ ಶಿಂದೆವಾಡಿ ಮುಂಬೈ ಪ್ಬಲಿಕ್‌ ಸ್ಕೂಲ್‌ ಸ್ಥಾನ ಪಡೆದುಕೊಂಡಿವೆ. ಇನ್ನು ಈ ಪ್ರಶಸ್ತಿಗಳನ್ನ ಅಕ್ಸೆಂಚರ್‌, ಅಮೆರಿಕನ್‌ ಎಕ್ಸ್‌ಪ್ರೆಸ್‌, ಯಯಸಾನ್‌ ಹಸನಾಹ್‌ ಹಾಗೂ ಲೆಮನನ್‌ ಫೌಂಡೇಶನ್‌ ಸಂಸ್ಥೆಗಳ ಸಹಯೋಗದಲ್ಲಿ T4 ಶಿಕ್ಷಣ ಸಂಸ್ಥೆ 2022ರಿಂದ ಈ ಪ್ರಶಸ್ತಿಗಳನ್ನ ಕೊಡಲು ಆರಂಭಿಸಿದೆ.

-masthmagaa.com

Contact Us for Advertisement

Leave a Reply