91ನೇ ವಯಸ್ಸಿನಲ್ಲಿ ಯೋಗಾಚರಣೆ ಮಾಡಿದ ಮಾಜಿ ಪ್ರಧಾನಿ ದೇವೆಗೌಡ!

masthmagaa.com:

ಜಗತ್ತಿನಾದ್ಯಂತ ಇಂದು 9ನೇ ಅಂತಾರಾಷ್ಟ್ರೀಯ ಯೋಗ ದಿನವನ್ನ ಆಚರಿಸಲಾಗಿದ್ದು ಇತ್ತ ದೇಶದಲ್ಲೂ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಯೋಗಾಭ್ಯಾಸ ನಡೆಸಿದ್ದಾರೆ. ಈ ಕಡೆ ಮಾಜಿ ಪ್ರಧಾನಿ ಎಚ್‌.ಡಿ ದೇವೆಗೌಡ ತಮ್ಮ 90 ವಯಸ್ಸಿನಲ್ಲೂ ಯೋಗ ಮಾಡಿದ್ದು, ಯೋಗದಿಂದ ನನಗೆ ಉಪಯೋಗ ಆಗಿದೆ ಅಂತ ತಿಳಿಸಿದ್ದಾರೆ. ಇತ್ತ ದೇಶಿಯವಾಗಿ ನಿರ್ಮಿಸಲಾಗಿರೋ ಭಾರತದ ಮೊದಲ ವಿಮಾನವಾಹಕ ನೌಕೆ INS ವಿಕ್ರಾಂತ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸಿಬ್ಬಂದಿಗಳ ಜೊತೆ ಯೋಗ ಮಾಡಿದ್ದಾರೆ. ಈ ಕಡೆ ರಾಜ್ಯದಲ್ಲೂ ಯೋಗ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದ್ದಾರೆ. ವಿಧಾನಸಭೆ ಸಭಾಧ್ಯಕ್ಷ ಯುಟಿ ಖಾದರ್ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವ್ರು ಭಾಗಿಯಾಗಿದ್ದಾರೆ.

-masthmagaa.com

Contact Us for Advertisement

Leave a Reply