ತೈವಾನ್‌ ಅಧ್ಯಕ್ಷೀಯ ಚುನಾವಣೆಗೆ ಫಾಕ್ಸ್‌ಕಾನ್‌ ಸಂಸ್ಥಾಪಕ ಎಂಟ್ರಿ!

masthmagaa.com:

ಆಪಲ್‌ ಕಂಪನಿಗೆ ಬಿಡಿಭಾಗಗಳನ್ನ ಸಪ್ಲೈ ಮಾಡುವ ಫಾಕ್ಸ್‌ಕಾನ್‌ ಕಂಪನಿಯ ಸಂಸ್ಥಾಪಕ ಟೆರ್ರಿ ಗೋ, ರಾಜಕೀಯಕ್ಕೆ ಎಂಟ್ರಿ ಕೊಡೋಕೆ ಮುಂದಾಗಿದ್ದಾರೆ. ತೈವಾನ್‌ನ ಮುಂದಿನ ಅಧ್ಯಕ್ಷೀಯ ರೇಸ್‌ನಲ್ಲಿ ಇಂಡಿಪೆಂಡೆಂಟ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯೋದಾಗಿ ಹೇಳಿದ್ದಾರೆ. ಅಂದ್ಹಾಗೆ 2019ರಲ್ಲಿ ಫಾಕ್ಸ್‌ಕಾನ್‌ ಮುಖ್ಯಸ್ಥರ ಸ್ಥಾನದಿಂದ ಕೆಳಗಿಳಿದಿದ್ದ, ಟೆರ್ರಿ ಅದೇ ವರ್ಷ ತೈವಾನ್‌ನ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸೋಕೆ ಮುಂದಾಗಿದ್ರು. ಆದ್ರೆ ಈಗಿನ ಅಪೋಸಿಶನ್‌ ಪಾರ್ಟಿಯಲ್ಲಿ ನಾಮಿನೇಶನ್‌ ಗೆಲ್ಲೋಕೆ ವಿಫಲವಾಗಿದ್ರು. ಇದೀಗ ಮುಂದಿನ ಜನವರಿಯಲ್ಲಿ ನಡೆಯುವ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲೋಕೆ ರೆಡಿಯಾಗಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ. ಇನ್ನು ಇವ್ರು ಸ್ಪರ್ಧೆಗೆ ಎಂಟ್ರಿಯಾಗ್ಬೇಕು ಅಂದ್ರೆ 2.9 ಲಕ್ಷ ಮತದಾರರ ಸಿಗ್ನೇಚರ್‌ನ್ನ ಗಳಿಸಬೇಕು. ಆಗ ಮಾತ್ರ ಚುನಾವಣೆಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗಿ ನಾಮಿನೇಶನ್‌ ಫೈಲ್‌ ಮಾಡಬಹುದು.

-masthmagaa.com

Contact Us for Advertisement

Leave a Reply