PLI ಸ್ಕೀಮ್‌ ಅಡಿಯಲ್ಲಿ ಈ ವರ್ಷ ₹4,400 ಕೋಟಿ ಬಳಕೆ!

masthmagaa.com:

PLI ಸ್ಕೀಮ್‌ ಅಡಿಯಲ್ಲಿ MNCಗಳ ಮೇಲೆ ಕೋಟಿ ಕೋಟಿ ಹಣ ಸುರಿಯೋಕೆ ಕೇಂದ್ರ ಸರ್ಕಾರ ಮುಂದಾಗಿದೆ. ಫಾಕ್ಸ್‌ಕಾನ್‌, ವಿಸ್ಟ್ರಾನ್‌, ಪೆಗಟ್ರಾನ್‌ ಹಾಗೂ ಸ್ಯಾಮ್‌ಸಂಗ್‌ ಕಂಪನಿಗಳು PLI ಸ್ಕೀಮ್‌ನಲ್ಲಿ ಒಟ್ಟಾರೆಯಾಗಿ ₹4,400 ಕೋಟಿ ಇನ್ಸೆಂಟಿವ್‌ ಪಡೆಯಲಿವೆ. ಎಕನಾಮಿಕ್ಸ್‌ ಟೈಮ್ಸ್‌ ರಿಪೋರ್ಟ್‌ ಪ್ರಕಾರ, ಸ್ಯಾಮ್‌ಸಂಗ್‌ ಇದೇ ಮೊದಲ ಬಾರಿಗೆ PLI ಪಡೆಯೋಕೆ ಸರ್ಕಾರ ವಿಧಿಸಿಸೋ ಟಾರ್ಗೆಟ್‌ಗಳನ್ನ ರೀಚ್‌ ಮಾಡಿ ಹಣ ಪಡೆಯೋಕೆ ಎಲಿಜಿಬಲ್‌ ಆಗಿದೆ. ಇದೇ ಟೈಮಲ್ಲಿ ಸ್ಯಾಮ್‌ಸಂಗ್‌ ಭಾರತದಲ್ಲಿ ಸೆಮಿಕಂಡಕ್ಟರ್‌ R&D ಫೆಸಿಲಿಟಿಯನ್ನ ಸ್ಥಾಪಿಸಿದೆ. PLI ಸ್ಕೀಮ್‌ನ ಫಲಾನುಭವಿ ಮೊಬೈಲ್‌ ಕಂಪನಿಗಳು ಕಳೆದ ಆಪ್ರಿಲ್‌ನಿಂದ ಡಿಸೆಂಬರ್‌ವರೆಗೆ $10.5 ಬಿಲಿಯನ್ ಮೌಲ್ಯದ ಮೊಬೈಲ್‌ಗಳನ್ನ ಎಕ್ಸ್‌ಪೋರ್ಟ್‌ ಮಾಡಿವೆ. ಶಿಯೋಮಿ ಮೊಬೈಲ್‌ಗಳನ್ನ ತಯಾರಿಸೋ ರೈಸಿಂಗ್‌ ಸ್ಟಾರ್‌, ಭಾರತದ ಲಾವಾ, ಓಪ್ಟಿಮಸ್‌ ಎಲೆಕ್ಟ್ರಾನಿಕ್ಸ್‌, ಟಾರ್ಗೆಟ್‌ ರೀಚ್‌ ಆಗುವಲ್ಲಿ ಫೇಲಾಗಿವೆ. ಸದ್ಯ ಭಾರತ ಈ ಸ್ಕೀಮ್‌ನಲ್ಲಿ ಎತ್ತಿಟ್ಟಿರೋ ₹6,504 ಕೋಟಿ ಹಣದಲ್ಲಿ 4,400 ಕೋಟಿ ಅಷ್ಟೇ ವೆಚ್ಚವಾಗಿದೆ.

-masthmagaa.com

Contact Us for Advertisement

Leave a Reply