ಬೆಂಗಳೂರು: 2024ರಲ್ಲಿ ಫಾಕ್ಸ್‌ಕಾನ್‌ ಐಫೋನ್‌ ತಯಾರಿಕ ಘಟಕ ಪ್ರಾರಂಭ?

masthmagaa.com:

2024ರ ಏಪ್ರಿಲ್ 1ರ ವೇಳೆಗೆ ಐಫೋನ್‌ ತಯಾರಕ ಕಂಪನಿ ಫಾಕ್ಸ್‌ಕಾನ್‌ ಬೆಂಗಳೂರಿನ ದೇವನಹ‍ಳ್ಳಿ ಬಳಿಯ ಘಟಕದಲ್ಲಿ ಉತ್ಪಾದನೆ ಆರಂಭಿಸುವ ಗುರಿ ಹೊಂದಿದೆ. ಹೀಗಾಗಿ ಜುಲೈ 1ರ ಒಳೆಗೆ ಸಂಪೂರ್ಣವಾಗಿ ಭೂಮಿಯನ್ನ ಹಸ್ತಾಂತರ ಮಾಡಲಾಗುತ್ತೆ ಅಂತ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್‌ ಹೇಳಿದ್ದಾರೆ. ಇನ್ನು ದೇವನಹಳ್ಳಿ ಸಾಮಾನ್ಯ ಕೈಗಾರಿಕಾ ಪ್ರದೇಶದಲ್ಲಿ 300 ಎಕರೆ ಭೂಮಿಯನ್ನ ಗುರುತಿಸಲಾಗಿದೆ. 2024ರ ಏಪ್ರಿಲ್ 1ರ ವೇಳೆಗೆ ಇಲ್ಲಿ ಕಂಪನಿ ತನ್ನ ತಯಾರಿಕೆ ಶುರು ಮಾಡುವ ಗುರಿ ಹಾಕಿಕೊಂಡಿದೆ. ಇದನ್ನು ಗಮನದಲ್ಲಿರಿಸಿಕೊಂಡು ಜುಲೈ 1ಕ್ಕೆ ಮುಂಚೆ ಕಂಪನಿಗೆ ಭೂಮಿ ಹಸ್ತಾಂತರಿಸಲಾಗುವುದು. ಜೊತೆಗೆ ಕಂಪನಿಗೆ ದಿನಕ್ಕೆ 50 ಲಕ್ಷ ಲೀಟರ್ ನೀರು ಬೇಕಾಗುತ್ತೆ ಅಂತ ತಿಳಿಸಿದೆ.‌ ಇದನ್ನು ಪೂರೈಸುವ ಜೊತೆಗೆ ಗುಣಮಟ್ಟದ ವಿದ್ಯುತ್, ರಸ್ತೆ ಸಂಪರ್ಕ ಇತ್ಯಾದಿ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತದೆ ಅಂತ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply