INS ವಿಕ್ರಾಂತ್‌ ಹಾಗೂ ವಿಕ್ರಮಾದಿತ್ಯಗಳಿಗೆ ಹೊಸ ರಫೇಲ್‌ಗಳ ಶಕ್ತಿ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ನೌಕಾಪಡೆಯ ವಿಮಾನವಾಹಕ ನೌಕೆಗಳಾದ INS ವಿಕ್ರಾಂತ್‌ ಹಾಗೂ ವಿಕ್ರಮಾದಿತ್ಯಕ್ಕಾಗಿ 26 ರಫೇಲ್‌ ಮರೈನ್‌ ಜೆಟ್‌ಗಳನ್ನ ಖರೀದಿಸಲು ಭಾರತ ಸಲ್ಲಿಸಿರೊ ಮನವಿಗೆ ಫ್ರಾನ್ಸ್‌ ಗ್ರೀನ್‌ ಸಿಗ್ನಲ್ ನೀಡಿದೆ. ಈ ಮಾಹಿತಿಯನ್ನ ರಕ್ಷಣಾ ಮೂಲಗಳು ತಿಳಿಸಿವೆ. ನೌಕಾಪಡೆಗಾಗಿ 22 ಸಿಂಗಲ್‌ ಸೀಟ್‌ನ ರಫೆಲ್‌‌ ಮರೈನ್ ಯುದ್ಧ ವಿಮಾನಗಳು, 4 ಟ್ವಿನ್‌ ಸೀಟ್‌ಗಳ ಟ್ರೈನರ್‌ ಜೆಟ್‌ಗಳು ಹಾಗೂ 3 ಸ್ಕಾರ್‌ಪೀನ್‌ ಸಬ್‌ಮರೀನ್‌ಗಳ ಖರೀದಿಗೆ ಭಾರತ ಲೆಟರ್‌ ಆಫ್‌ ರಿಕ್ವೆಸ್ಟ್‌ ಅಥ್ವಾ ವಿನಂತಿ ಪತ್ರ ಕಳಸಿತ್ತು. ಇದಕ್ಕೆ ಉತ್ತರವಾಗಿ ಫ್ರಾನ್ಸ್‌ ಮೊದಲ ಹಂತದ ಅಪ್ರೂವಲ್‌ ನೀಡಿದೆ. ಜೊತೆಗೆ ಬೆಲೆ ಹಾಗೂ ಇತರ ಮಾಹಿತಿ ಒಳಗೊಂಡ ಸ್ವೀಕಾರ ಪತ್ರವನ್ನ ಫ್ರಾನ್ಸ್‌ ನೀಡಿದೆ ಅಂತ ಹೇಳಲಾಗಿದೆ. 26 ರಫೇಲ್‌ ಜೆಟ್‌ಗಳು ಹಾಗೂ ಸಂಬಂಧಿತ ಉಪಕರಣಗಳಿಗೆ ಸುಮಾರು 50 ಸಾವಿರ ಕೋಟಿ ರೂಪಾಯಿ ಬೇಕಾಗ್ಬೋದು ಅಂತ ಅಂದಾಜಿಸಲಾಗಿದೆ. ಕೇವಲ 3 ಸ್ಕಾರ್‌ಪೀನ್‌ ಸಬ್‌ ಮರೀನ್‌ಗಳಿಗೆ 30 ಸಾವಿರ ಕೋಟಿ ವೆಚ್ಚವಾಗುತ್ತೆ ಅಂತೇಳಲಾಗ್ತಿದೆ. ಕಳೆದ ಜುಲೈನಲ್ಲೆ ಈ ಬಗ್ಗೆ ಫ್ರಾನ್ಸ್‌ ಜೊತೆ ಮಾತುಕತೆ ನಡೆಸಲಾಗಿತ್ತು. ಆದ್ರೆ ಈ ಬಗ್ಗೆ ಉಭಯ ದೇಶಗಳು ಯಾವುದೇ ಸ್ಟೇಟ್‌ಮೆಂಟ್‌ ನೀಡಿರ್ಲಿಲ್ಲ. ಇದೀಗ ವಿಮಾನಗಳ ಅಂತಿಮ ವೆಚ್ಚದ ಮಾತುಕತೆ ನಡೀತಿದೆ. ವಿಮಾನ ತಯಾರಿಸೋ ದಸ್ಸೋ ಮಧ್ಯಸ್ಥಿಕೆ ಇಲ್ಲದೆ ಉಭಯ ಸರ್ಕಾರಗಳ ನಡುವೆ ಈ ಡೀಲ್‌ ನಡೆಯಲಿದೆ ಎನ್ನಲಾಗ್ತಿದೆ. ಸದ್ಯ ನೇವಿ ಬಳಿ ಇರೋ ಎರಡು ವಿಮಾನವಾಹಕ ನೌಕೆಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಫೈಟರ್‌ ಜೆಟ್‌ಗಳು ಇಲ್ಲ. ಹಾಗೇನೆ ಸಬ್‌ಮರೀನ್‌ಗಳ ಸಂಖ್ಯೆಯನ್ನೂ ಜಾಸ್ತಿ ಮಾಡ್ಬೇಕಿದೆ. ಇದೇ ಕಾರಣಕ್ಕೆ ಈ ಡೀಲನ್ನ ಫೈನಲ್‌ ಮಾಡೋಕೆ ಭಾರತ ಸಜ್ಜಾಗಿದೆ.

-masthmagaa.com

Contact Us for Advertisement

Leave a Reply