ಇಸ್ರೇಲ್‌ ಕಚೇರಿ ಮುಂದೆ ಬೆಂಕಿ ಹಚ್ಕೊಂಡಿದ್ದ ಅಮೆರಿಕ ಯೋಧ ನಿಧನ!

masthmagaa.com:

ಇಸ್ರೇಲ್‌ ರಾಯಭಾರಿ ಕಚೇರಿ ಮುಂದೆ ಬೆಂಕಿ ಹಚ್ಕೊಂಡಿದ್ದ ಅಮೆರಿಕದ ಸೈನಿಕರೊಬ್ರು ಇದೀಗ ಸಾವನ್ನಪ್ಪಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ. ಅಲ್ದೇ ಇವ್ರು ಗಾಜಾ ಯುದ್ದದ ವಿಚಾರವಾಗಿ ಪ್ಯಾಲಸ್ತೀನಿಯರ ಪರ ಹೋರಾಟದ ಭಾಗವಾಗಿ ಬೆಂಕಿ ಹಚ್ಕೊಂಡಿದ್ರು. ಈ ವೇಳೆ ʻಫ್ರಿ ಪ್ಯಾಲಸ್ತೀನ್‌ʼ ಅಂತ ಘೋಷಣೆ ಕೂಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಕೂಡ ವೈರಲ್‌ ಆಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇವ್ರನ್ನ ಅಮೆರಿಕಾ ಸೇನಾ ಸಿಬ್ಬಂದಿ ಸಮೀಪದ ಆಸ್ಪತ್ರೆಗೆ ದಾಖಲಿಸಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಅವ್ರಿಗ ಮೃತ ಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply