ಹೇಗಿರಲಿದೆ ಈ ವಾರದ ಮಾರ್ಕೆಟ್?‌ ನಿಫ್ಟಿ ದಾಖಲೆ ಬರೆಯುವ ಸಾಧ್ಯತೆ!

masthmagaa.com:

ಕಳೆದ ವಾರ IT ಶೇರುಗಳ ಒಳ್ಳೆ ಪರ್‌ಫಾರ್ಮನ್ಸ್‌ ಮಾರ್ಕೆಟ್‌ ಗುಡ್‌ ನೋಟ್‌ನೊಂದಿಗೆ ಅಂತ್ಯವಾಗೋಕೆ ಕಾರಣವಾಗಿದ್ವು. ಅಮೆರಿಕದ ಅನಿರೀಕ್ಷತ ಹಣದುಬ್ಬರ ಏರಿಕೆ ಹೊರತಾಗಿಯೂ ಜನವರಿ 12ಕ್ಕೆ ಅಂತ್ಯವಾದ ಇಂಡಿಯನ್‌ ಶೇರ್‌ ಮಾರ್ಕೆಟ್‌ ಸೂಚ್ಯಂಕಗಳು ದಾಖಲೆಯ ಗರಿಷ್ಠ ಮಟ್ಟವನ್ನ ತಲುಪಿದ್ವು. ಇದೀಗ ಜನವರಿ 15 ರಂದು ಶುರುವಾಗುವ ವಾರದಲ್ಲಿ ನಿಫ್ಟಿ 22,000ದಿಂದ 22,100ರವರೆಗೆ ದಾಖಲೆಯ ಏರಿಕೆ ಕಾಣಬಹುದು ಎನ್ನಲಾಗಿದೆ. ಪ್ರಿ ಬಜೆಟ್‌ ನಿರೀಕ್ಷೆಗಳು ಈ ವಾರದ ಮಾರ್ಕೆಟ್‌ ಮೇಲೆ ಪ್ರಭಾವ ಬೀರಲಿದೆ. ಜೊತೆಗೆ ಸೋಮವಾರ ಡಿಸೆಂಬರ್‌ನ WPI (ಹೋಲ್‌ಸೇಲ್‌ ಪ್ರೈಸ್‌ ಇಂಡೆಕ್ಸ್) ಹಣದುಬ್ಬರ ಕೂಡ ಅನೌನ್ಸ್‌ ಆಗಲಿದೆ. ಇನ್ನು ಜಾಗತಿಕವಾಗಿ ನೋಡೋದಾದ್ರೆ, ಈ ವಾರ ಅಮೆರಿಕ ಹಾಗೂ ಚೀನಾದಿಂದ ಮ್ಯಾಕ್ರೋಎಕನಾಮಿಕ್ಸ್‌ ಡೇಟಾ ಅಂದ್ರೆ ಡಾಲರ್‌ ಇಂಡೆಕ್ಸ್‌, ಅಮೆರಿಕ ಬಾಂಡ್‌ ಯೀಲ್ಡ್‌ ಹಾಗೂ ಕ್ರ್ಯೂಡ್‌ ಆಯಿಲ್‌ ದರ ಸೇರಿದಂತೆ ಆರ್ಥಿಕ ಹರಿವಿನ ಒಟ್ಟು ಚಿತ್ರಣ ಸಿಗಲಿದೆ. ಸೋ ಇವೆಲ್ಲವೂ ಸೋಮವಾರದಿಂದ ಶುರುವಾಗುವ ಮಾರ್ಕೆಟ್‌ ಮೇಲೆ ಪ್ರಭಾವ ಬೀರಲಿವೆ. ಸೋಮವಾರದ ಮಾರ್ಕೆಟ್‌ನಲ್ಲಿ Q3ಯಲ್ಲಿ ನೆಟ್‌ ಪ್ರಾಫಿಟ್‌ನಲ್ಲಿ 12% ಕುಸಿತಗೊಂಡಿರೊ ವಿಪ್ರೋ ಹಾಗೂ 6.2% ಲಾಭ ಕಂಡಿರೊ HCL ಟೆಕ್ನಾಲಜೀಸ್‌ ಶೇರುಗಳು ಫೋಕಸ್‌ನಲ್ಲಿ ಇರಲಿವೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply