ರಾಜ್ಯಸಭೆಯಲ್ಲೂ ಸರ್ವಾವನುಮತದಿಂದ ಮಹಿಳಾ ಮೀಸಲಾತಿ ಮಸೂದೆ ಪಾಸ್‌!

masthmagaa.com:

ಲೋಕಸಭೆಯಲ್ಲಿ ಅಂಗೀಕೃತವಾಗಿರುವ ಮಹಿಳಾ ಮೀಸಲಾತಿ ಮಸೂದೆಗೆ ರಾಜ್ಯಸಭೆಯಲ್ಲೂ ಅಂಗೀಕಾರ ದೊರೆತಿದೆ. ಈ ಮೂಲಕ ಹೊಸ ಪಾರ್ಲಿಮೆಂಟ್‌ನಲ್ಲಿ ಮೊದಲ ಮಸೂದೆಯೇ ಎರಡೂ ಸದನಗಳಲ್ಲಿಯೂ ಅಂಗಿಕಾರವಾಗಿದೆ. ನಿನ್ನೆ ರಾತ್ರಿ ನಡೆದ ಸಂಸತ್ತಿನ ವಿಶೇಷ ಅಧಿವೇಶನದ ರಾಜ್ಯಸಭೆ ಕಲಾಪದಲ್ಲಿ ಸದನದ ಎಲ್ಲ 215 ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದ್ದಾರೆ. ಈ ಮೂಲಕ ಹೊಸ ಸಂಸತ್ತಿನಲ್ಲಿ ಅಂಗೀಕಾರ ದೊರೆತ ಮೊದಲ ಮಸೂದೆಯೆಂಬ ಹೆಗ್ಗಳಿಕೆಗೆ ಮಹಿಳಾ ಮೀಸಲಾತಿ ಮಸೂದೆ ಪಾತ್ರವಾಗಿದೆ. ಎರಡೂ ಸದನಗಳಲ್ಲಿ ಅಂಗೀಕೃತವಾದ ಮಸೂದೆ ರಾಷ್ಟ್ರಪತಿಗಳ ಅಂಕಿತಕ್ಕೆ ಹೋಗಲಿದೆ. ರಾಷ್ಟ್ರಪತಿಗಳು ಅಂಗೀಕರಿಸಿದ ಬಳಿಕ ಕಾಯ್ದೆಯಾಗಲಿದೆ. ಇನ್ನು ನಿಬಂಧನೆಗಳ ಪ್ರಕಾರ ಜನಗಣತಿ ಬಳಿಕ ಮಹಿಳಾ ಮೀಸಲಾತಿ ಕಾನೂನು ಜಾರಿಯಾಗಲಿದೆ. ಈ ಬಗ್ಗೆ ಮಾತಾಡಿರುವ ಪ್ರಧಾನಿ ಮೋದಿ, ನಮ್ಮ ರಾಷ್ಟ್ರದ ಪ್ರಜಾಸತ್ತಾತ್ಮಕ ಪಯಣದಲ್ಲಿ ಇದು ನಿರ್ಣಾಯಕ ಕ್ಷಣ. 140 ಕೋಟಿ ಭಾರತೀಯರಿಗೆ ಅಭಿನಂದನೆಗಳು. ನಾರಿ ಶಕ್ತಿ ವಂದನ್ ಅಧಿನಿಯಮದ ಪರವಾಗಿ ಮತ ಚಲಾಯಿಸಿದ ಎಲ್ಲಾ ರಾಜ್ಯಸಭಾ ಸದಸ್ಯರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಅಂತ ಹೇಳಿದ್ದಾರೆ. ಅಂದ್ಹಾಗೆ ಮೊದಲೆ ನಿಗದಿಪಡಿಸಿದಂತೆ ವಿಶೇಷ ಅಧಿವೇಶನದ ಐದನೇ ದಿನವಾದ ಇಂದು ಸೆಶನ್‌ ಮುಕ್ತಾಯಗೊಳ್ಳಬೇಕಿತ್ತು. ಆದ್ರೆ ನಿನ್ನೆ ಮಸೂದೆ ಪಾಸ್‌ ಆದ ಬಳಿಕೆ ಕಲಾಪವನ್ನ ಅನಿರ್ಧಿಷ್ಟಾವಧಿವರೆಗೆ ಮುಂದೂಡಲಾಗಿದೆ.

-masthmagaa.com

Contact Us for Advertisement

Leave a Reply